ಗುತ್ತಿಗಾರಿನಲ್ಲಿ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆ

0

ಬಿಜೆಪಿಯು ತಲೆಯಿಂದ ಕಾಲಿನವರೆಗೂ ಭ್ರಷ್ಟಾಚಾರ ಮಾಡುತ್ತಿದೆ : ಬಿ.ಕೆ.ಹರಿಪ್ರಸಾದ್

ಎಲ್ಲದರಲ್ಲೂ ಸೀಮೆ ದಾಟಿ ಭ್ರಷ್ಟಾಚಾರ ಮಾಡುತ್ತಿದೆ ಬಸವರಾಜ ಬೊಮ್ಮಾಯಿ ಸರಕಾರ. ಲೋಕೋಪಯೋಗಿ ಕೆಲಸದಿಂದ 40% ಕಮಿಷನ್ ಪಡೆಯುವುದು ಜಗಜ್ಹಾಹಿರಾಗಿದೆ. ಮೋದಿ ಮಾತ್ರ ಹೇಳುತ್ತಾರೆ ನಾ ಕಾವೋಂಗಾ ನಾ ಕಾನಾ ದೇಂಗಾ ಎಂದು. ಇಲ್ಲಿ ಬೆಳಗಾವಿನ ಕಾಂಟ್ರಾಕ್ಟರ್ ಒಬ್ಬರ ಕೈಯಿಂದ ಈಶ್ವರಪ್ಪ 40% ಕಮಿಷನ್ ಕೇಳಿ ಹಣ ನೀಡಲೂ ಆಗದೆ ಮಾಡಿದ ಕೆಲಸದ ಬಿಲ್ ಬರದೆ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿಯು ತಲೆಯಿಂದ ಕಾಲಿನವರೆಗೂ ಭ್ರಷ್ಟಾಚಾರ ಮಾಡುತ್ತಿದೆ. ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.


ಅವರು ಗುತ್ತಿಗಾರಿನಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು. ಹೆಣದ ಮೇಲೆ ಜಿ.ಎಸ್.ಟಿ ಹಾಕಲು ಹೊರಟಿದ್ದಾರೆ ಇವರುಗಳು. ಸ್ವಂತ ಕಾರ್ಯಕ್ರಮ ಮಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ 15 ಲಕ್ಷ ಕೊಡುತ್ತೇವೆ ಅಂದರು 15 ರೂ. ಕೊಡಲಾಗಲಿಲ್ಲ ಎಂದರು. ಅಂದು ಕಾಂಗ್ರೆಸ್ ಹೋರಾಡುವಾಗ ಬಿಜೆಪಿ ಪಕ್ಷದರು ಬ್ರಿಟಿಷರ ಗುಲಾಮರಾಗಿದ್ದರು. ಇತ್ತ ನಳಿನ್ ಕುಮಾರ್ ಕಟೀಲ್ ಗೆ ಊರಿಗೆ ಬೆಂಕಿ ಇಡಲು ಬೆಂಕಿ ಪೊಟ್ಟಣ ನೀಡಿದಂತಾಗಿದೆ ಎಂದರು.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ, ಈ ಭಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಖಚಿತ. ಬಿಜೆಪಿಗೆ ಯಾವ ಆಧಾರದಲ್ಲಿ ಓಟು ಹಾಕಬೇಕು. ಇಷ್ಟು ವರ್ಷ ಆಡಳಿತ ಮಾಡಿಯೂ ಅಭಿವೃದ್ಧಿ ಮಾಡದಕ್ಕಾ, ಕಮಿಷನ್ ಪಡೆದಕ್ಕಾ, ಭ್ರಷ್ಟಾಚಾರ ಮಾಡಿದಕ್ಕಾಗಿ ಓಟು ನೀಡಬೇಕಾ ಎಂದರು. 16 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ 16 ಲಕ್ಷ ಉದ್ಯೋಗ ಸೃಷ್ಟಿಸಿಲ್ಲ ಅಂದರು. ಇದು ಇನ್ನು 60 ದಿನ ಆಯುಷ್ಯದ ಸರ್ಕಾರ ಅಂದರು.

ಯು.ಟಿ ಖಾದರ್ ಮಾತನಾಡಿ ನಿವೇಶನ ಕೊಡದ, ರೇಷನ್ ಕಾರ್ಡ್ ನೀಡದ ಸರ್ಕಾರ ಇದ್ದರೆ ಅದು ಬಿಜೆಪಿ ಮಾತ್ರ. ಕಾರ್ಮಿಕರ, ರೈತರ, ಶೋಷಿತರ ಪರವಾಗಿ ನಿಲ್ಲದೆ ಧರ್ಮ ಧರ್ಮದ ಮೇಲೆ ದ್ವೇಷ ಸೃಷ್ಟಿಸಿ ಛಿದ್ರ ಛಿದ್ರವಾಗಿ ಮಾಡಿ ದೇಶ ಒಡೆಯುವ ಕೆಲಸವನ್ನು ಮಾಡುತ್ತಾರೆ. ಎಲ್ಲರನ್ನು ಒಟ್ಟಿಗೆ ಕೊಂಡು ಹೋಗುವ ಮಾತು ಇದ್ದರೆ ಅದು ಕಾಂಗ್ರೆಸ್ಸಿಂದ ಮಾತ್ರ ಸಾಧ್ಯ. ದಕ್ಷಿಣ ಕನ್ನಡಕ್ಕೆ ಕುಚ್ಲಕ್ಕಿ ಕೊಡುವ ಯೋಗ್ಯತೆ ಇಲ್ಲದ ಇವರು ಮತ ಕೇಳಲು ಯಾವ ನೈತಿಕತೆ ಇದೆ. ಕಾಂಗ್ರೆಸ್ ಸರ್ಕಾರ ಹಸಿದ ಕೂಲಿ ಕಾರ್ಮಿಕರಿಗೆ, ಡ್ರೈವರ್ ಗಳಿಗೆ, ಕಾಲೇಜು ಮಕ್ಕಳಿಗೆ ಮತ್ತಿತರಿಗೆ ಮಾಡಿದ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿ ಬಡವರಿಗೆ ದ್ರೋಹ ಬಗೆದರು. ಮಧ್ಯಾಹ್ನದ ಊಟಕ್ಕೆ 70 – 80 ರೂಪಾಯಿ ಕೊಟ್ಟು ಊಟ ಮಾಡುವಂತೆ ಮಾಡಿದರು. ಸರ್ಕಾರಿ ನೌಕರರ ವರ್ಗಾವಣೆಯಲ್ಲೂ ಹಣ ಮಾಡುತ್ತಾರೆ. ಬಿಜೆಪಿ ಸರ್ಕಾರದ ಡಬ್ಬಲ್ ಇಂಜಿನ್ ಕೈಕೊಟ್ಟಿದೆ ಮಾಲಿನ್ಯಯುತ ಹೋಗೆ ಮಾತ್ರ ಹೊರಬರುತ್ತಿದೆ ಅಂದರು. ಎಲ್ಲವನ್ನೂ ರಾಷ್ಟ್ರೀಕರಣ ಮಾಡಿ ನಮ್ಮ ಯುವಜನತೆಗೆ ಉದ್ಯೋಗ ಇಲ್ಲದಂತೆ ಮಾಡಿದೆ ಎಂದು ಆಪಾದಿಸಿದರು. ಮಧುಬಂಗಾರಪ್ಪ ಮಾತನಾಡಿ ದ.ಕ ಜಿಲ್ಲೆಯಲ್ಲಿ ಬದಲಾವಣೆ ತರಲು ಜನರು ಮುಂದಾಗಿದ್ದಾರೆ. ಭೂ ಹಕ್ಕನ್ನು ನೀಡಿದವರು ನಮ್ಮ ಕಾಂಗ್ರೆಸ್‌ನ ದೇವರಾಜ ಅರಸರು. ಬಂಗಾರಪ್ಪರ ಕಾಂಗ್ರೆಸ್ ಸರಕಾರ ನೀಡಿದ ಪುಕ್ಸಟ್ಟೆ ವಿದ್ಯುತ್ ಯೋಜನೆ ಈಗಲೂ ಮುಂದುವರೆದಿದೆ. ಆಶ್ರಯ ಯೋಜನೆ ಕಾಂಗ್ರೆಸ್ ಕೊಡುಗೆ. ಅಕ್ರಮ ಸಕ್ರಮ ಕಾಂಗ್ರೆಸ್ ಕೊಡುಗೆ ಬಿಜೆಪಿ ಮಾತ್ರ ಪೆನ್ ಹಿಡಿಯುವ ಕೈಯಲ್ಲಿ ಚಾಕು ಚೂರಿ ನೀಡಿ ಭಾವನಾತ್ಮಕ ಹೋರಾಟಕ್ಕೆ ಇಳಿದಿದೆ ಎಂದು ಕಿಡಿಕಾರಿದರು.


ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಶಾಸಕ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಂ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೃಷ್ಣಪ್ಪ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕೆ.ಪಿ.ಸಿ.ಸಿ.ಮಾಜಿ ಸಂಯೋಜಕ ಪ್ರದೀಪ್ ರೈ, ಟಿ.ಎಂ.ಶಹೀದ್, ಎಂ.ಜಿ ಹೆಗಡೆ, ಎಂ ಎಸ್ ಮೊಹಮ್ಮದ್, ಸತೀಶ್ ಕೆಡೆಂಜಿ, ಡಾ।ರಘ ಪಕ್ಷದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭರತ್ ಮುಂಡೋಡಿ ಸ್ವಾಗತಿಸಿದರು. ಮಂಜುನಾಥ ಭಂಡಾರಿ ಪ್ರಸ್ತಾವಿಕ ಮಾತನಾಡಿದರು. ಪಿ.ಸಿ ಜಯರಾಮ ವಂದಿಸಿದರು.
ದಿನೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಗುತ್ತಿಗಾರು ಜಿ.ಪಂ ಕ್ಷೇತ್ರದ ಗ್ರಾಮ ಸಮಿತಿಯ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here