ಕೋಲ್ಚಾರು ಶ್ರೀಮತಿ ದೇವಮ್ಮ ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಮನೆತನದ ದಿ. ಮಾಯಿಲಪ್ಪ ಗೌಡ ರವರ ಪತ್ನಿ ಶ್ರೀಮತಿ ದೇವಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹ ಕೋಲ್ಚಾರಿನಲ್ಲಿ ಫೆ.5 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ ಬಾಲಚಂದ್ರ ಕೋಲ್ಚಾರು, ಇಬ್ಬರು ಪುತ್ರಿಯರಾದ ಶ್ರೀಮತಿ ಲಲಿತಾ, ಶ್ರೀಮತಿ ಉಮಾವತಿ, ಸೊಸೆ ಶ್ರೀಮತಿ ಪದ್ಮಾವತಿ ಮತ್ತು ಅಳಿಯಂದಿರನ್ನು , ಮೊಮ್ಮಕ್ಕಳನ್ನು ಹಾಗೂ ಬಂಧು ವರ್ಗದವರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.