ರಸ್ತೆಗೆ ಅಡ್ಡ ಬಂದ ಆನೆಗಳ ಹಿಂಡು, ಹೆದರಿ ಬೈಕಿನಿಂದ ಬಿದ್ದು ಸವಾರನಿಗೆ ಗಾಯ

0


ಮಂಡೆಕೋಲು ರಸ್ತೆಯ ಡೆಂಜಿಗುರಿ ಎಂಬಲ್ಲಿ ನಿನ್ನೆ (ಫೆ.೧೦) ರಾತ್ರಿ ಅನೆಗಳ ಹಿಂಡು ಕಾಣಸಿಕ್ಕಿದ್ದು, ಈ ರಸ್ತೆಯ ಮೂಲಕ ಬರುತ್ತಿದ್ದ ಬೈಕ್ ಸವಾರರೊಬ್ಬರು ಅತಂಕದಿಂದ ಬ್ರೇಕ್ ಹಾಕಿದ ಕಾರಣ
ಬಿದ್ದು ಗಾಯಗೊಂಡ ಘಟನೆ ಸಂಭವಿಸಿದೆ.
ತಾಜುದ್ದೀನ್ ಎಂಬುವರು ಸುಳ್ಯದಿಂದ ಮಂಡೆಕೋಲಿಗೆ ಬೈಕ್‌ನಲ್ಲಿ ಹೋಗುತ್ತಿದ್ದು ಈ ವೇಳೆ ನಾಲ್ಕು ಆನೆಗಳಿದ್ದ ಹಿಂಡು ರಸ್ತೆಗೆ ಅಡ್ಡಲಾಗಿ
ಬಂದಿದೆ ಎನ್ನಲಾಗಿದೆ.
ಈ ವೇಳೆ ತಾಜುದ್ದೀನ್ ರವರು ಆತಂಕಗೊಂಡು ಬೈಕಿನ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಕಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.