ಪಾಲಡ್ಕದಲ್ಲಿ ಕಾರುಗಳ ಮಧ್ಯೆ ಅಪಘಾತ : ಗಾಯಾಳುಗಳು ಆಸ್ಪತ್ರೆಗೆ

0


ಸುಳ್ಯ ಪೆರಾಜೆ ಮಧ್ಯೆ ಪಾಲಡ್ಕ ಎಂಬಲ್ಲಿ ಇಂದು ಅಪರಾಹ್ನ 3.30 ರ ಸುಮಾರಿಗೆ ಸ್ವಿಫ್ಟ್ ಕಾರು ಮತ್ತು ಸ್ಪೋರ್ಟ್ಸ್ ಕಾರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ವೃದ್ದೆ ಸೇರಿದಂತೆ ನಾಲ್ಕು ಮಂದಿ ಜಖಂಗೊಂಡ ಘಟನೆ ವರದಿಯಾಗಿದೆ.


ಸ್ಪೋರ್ಟ್ಸ್ ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು, ಸ್ವಿಫ್ಟ್ ಕಾರು ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿತ್ತು. ಗಾಯಾಳುಗಳನ್ನು ಕೆವಿಜಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.