ಕಲ್ಲುಗುಂಡಿ : ಶಿವರಾತ್ರಿಗೆ ಐಸ್ ಕ್ರೀಮ್ ಅಂಗಡಿಗೆ ನುಗ್ಗಿದ ಯುವಕರು

0

ಐಸ್ ಕ್ರೀಮ್ ಡಬ್ಬ ಮತ್ತು ನಗದು ದೋಚಿರುವ ಆರೋಪ, ಸಿಸಿಟಿವಿ ದೃಶ್ಯ ಆಧರಿಸಿ ಪತ್ತೆ ಹಚ್ಚಿದ ಪೊಲೀಸರು

ಕಲ್ಲುಗುಂಡಿ ಕೂಲಿ ಶೆಡ್ ಬಳಿ ಶಿವರಾತ್ರಿಯಂದು ರಾತ್ರಿ ಐವರು ಯುವಕರು ಐಸ್ ಕ್ರೀಮ್ ಅಂಗಡಿಗೆ ನುಗ್ಗಿ ಐಸ್ ಕ್ರೀಮ್ ಡಬ್ಬಗಳನ್ನು, ಮತ್ತು ಕ್ಯಾಶ್ ಕೌಂಟರ್ ನಲ್ಲಿದ್ದ 10ಸಾವಿರ ರೂ ಗಳನ್ನು ಕದ್ದೊಯ್ದಿರುವುದಾಗಿ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ತನಿಖೆ ಆರಂಭಿಸಿದ ಕಲ್ಲುಗುಂಡಿ ಪೊಲೀಸರು ಸಿಸಿ ಟಿವಿ ಆಧಾರದಿಂದ ಯುವಕರನ್ನು ಪತ್ತೆ ಹಚ್ಚಿದ್ದಾರೆ.

ಕಳ್ಳತನ ಮಾಡಿದ್ದಾರೆ ಎನ್ನಲಾಗಿರುವ ಯುವಕರು ವಿದ್ಯಾರ್ಥಿಗಳಾಗಿದ್ದು ಇಂದು ಅವರನ್ನು ಸುಳ್ಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.