ಪಂಜ: 6ನೇ ವರುಷದ ಶಟಲ್ ಬ್ಯಾಡ್ಮಿಂಟನ್-ಉದ್ಘಾಟನಾ ಸಮಾರಂಭ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ವಿಭಾಗ ಮತ್ತು ಬಾಲಕ ಮತ್ತು ಬಾಲಕಿಯರ 6 ನೇ ವರುಷದ ಡಬಲ್ಸ್ ಶೆಟಲ್ ಬ್ಯಾಡ್ ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಫಿ-2023’
ಫೆ. 26 ರಂದು ಪಂಜ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಉದ್ಘಾಟನೆ ಗೊಂಡಿತು.


ಕಾರ್ಯಕ್ರಮವನ್ನು ಹಿರಿಯ ಕ್ರೀಡಾಪಟು ಸುನಿಲ್ ಕುಮಾರ್ ತೋಟ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಸಭಾಧ್ಯಕ್ಷತೆ ವಹಿಸಿದ್ದರು .


ಮುಖ್ಯ ಅತಿಥಿಯಾಗಿ ಪಂಜ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ರವರು ಮಾತನಾಡಿ, “ಪಾಠ ಪ್ರವಚನದ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದರೆ ಅವರ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯಕರ ಬೆಳವಣಿಗೆ ಸಹಕಾರವಾಗುತ್ತದೆ” ಎಂದು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ಸಿ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .


ಸಂಘದ ನಿವೃತ್ತ ‌ಸಿಬಂದಿ ಆನಂದ ಗೌಡ ಜಳಕದಹೊಳೆ, ಸದಸ್ಯ ‌ವಸಂತ ನೆಕ್ಕಿಲ ಕ್ರೀಡಾಂಗಣಗಳಿಗೆ ತೆಂಗಿನ ಕಾಯಿ ಒಡೆದು ಕ್ರೀಡಾಂಗಣಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ಸುದೀಪ್ ರೈ ವೇದಿಕೆಗೆ ಆಹ್ವಾನಿಸಿದರು. ಸಿಬ್ಬಂದಿ ಜಯಶ್ರೀ ಪ್ರಾರ್ಥಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಚಂದ್ರಶೇಖರ ಪಿ.ಕೆ ನಿರೂಪಿಸಿದರು.ಸಂಘದ ಸಿಬ್ಬಂದಿ ಜಯಪ್ರಕಾಶ್ ತೋಟ ವಂದಿಸಿದರು.