ಪಂಜ: 6 ನೇ ವರ್ಷದ ಶಟಲ್ ಬ್ಯಾಡ್ಮಿಂಟನ್-‌ಸಮಾರೋಪ ಸಮಾರಂಭ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ವಿಭಾಗ ಮತ್ತು ಬಾಲಕ ಮತ್ತು ಬಾಲಕಿಯರ 6 ನೇ ವರುಷದ ಡಬಲ್ಸ್ ಶೆಟಲ್ ಬ್ಯಾಡ್ ಮಿಂಟನ್ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ-2023 ಫೆ. 26 ರಂದು ಪಂಜ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಜರುಗಿತು.‌
ಸಮಾರೋಪ ಸಮಾರಂಭದಲ್ಲಿ ಸಂಘದ ನಿರ್ದೇಶಕ, ನಿಕಟಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಕುಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ
“ದೇಶವು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿದೆ.ಆದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳು
ಅಗತ್ಯ.ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಮೂಡಲು ಅವರಿಗೆ ಪ್ರೇರಣೆ ಅಗತ್ಯವಿದೆ”ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಜೆಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಉಪಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎಣ್ಣೆಮಜಲು ಸ್ವಾಗತಿಸಿದರು.ಬಹುಮಾನ ವಿಜೇತರ ಪಟ್ಟಿಯನ್ನು ಸಂಘದ ‌ಸಿಬ್ಬಂದಿ ಶ್ರೀಮತಿ ಕವಿತಾ ಕೃಷ್ಣನಗರ ವಾಚಿಸಿದರು. ಸಂಘದ ಸಿಬ್ಬಂದಿ ಚಂದ್ರಶೇಖರ ಪಿ ಕೆ ನಿರೂಪಿಸಿದರು. ಸಂಘದ ಸಿಬ್ಬಂದಿ ಸತ್ಯದೀಪ್ ಎಂ ಆರ್
ವಂದಿಸಿದರು.


ಫಲಿತಾಂಶ:
ಸ್ಥಳೀಯ ಸಾರ್ವಜನಿಕ ವಿಭಾಗದ ಮತ್ತು ಬಾಲಕರ ವಿಭಾಗದಲ್ಲಿ ಪಂದ್ಯಾಟ ಜರುಗಿತು. ಬಾಲಕರ ವಿಭಾಗದಲ್ಲಿ 16 ತಂಡ ಪಾಲ್ಗೊಂಡಿತ್ತು.ಷಣ್ಮುಖ ಯು ಮತ್ತು ಆರ್ಯನ್ ಎಂ ಆರ್ (ಪ್ರಥಮ),
ಚಿನ್ಮಯ ಬಿ ಕೆ ಮತ್ತು ಮನ್ವಿತ್ ಬಿ ಕೆ (ದ್ವಿತೀಯ),ಪ್ರಣಾಮ್ ಎಸ್ ಮತ್ತು ಗೌತಮ್ ಎಸ್ (ತೃತೀಯ),ಪ್ರಜ್ಯೋತ್ ಎನ್ ಕೆ ಮತ್ತು ನಮನ್ (ಚತುರ್ಥ) ಸ್ಥಾನ ಗಳಿಸಿದರು.
ಸ್ಥಳೀಯ ಸಾರ್ವಜನಿಕ ವಿಭಾಗದಲ್ಲಿ
21 ತಂಡ ಪಾಲ್ಗೊಂಡಿತ್ತು.
ಜಗದೀಶ್ ಕೃಷ್ಣನಗರ ಮತ್ತು ಭರತ್ ನಾಯರ್ ಕೆರೆ (ಪ್ರಥಮ), ಬಾಲಕೃಷ್ಣ
ಕೋಲ್ಚಾರ್ ಮತ್ತು ದೀಪಕ್ ಡಿ.ಸೋಜ(ದ್ವಿತೀಯ), ರಾಮ್ ಕಿಶೋರ್ ಕೃಷ್ಣನಗರ ಮತ್ತು ವಚನ್ ಕುದ್ವ (ತೃತೀಯ),ಭರತ್ ಎಡಮಂಗಲ ಮತ್ತು ಪೂರ್ಣೇಶ್ವರ್ ಎಡಮಂಗಲ (ಚತುರ್ಥ) ಸ್ಥಾನ ಗಳಿಸಿದರು.ಸಂಘದ ಅಧ್ಯಕ್ಷ ಗಣೇಶ್ ಪೈ, ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ,ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ,ಲಿಗೋಧರ ಆಚಾರ್ಯ, ಚಿನ್ನಪ್ಪ ಚೊಟ್ಟೆಮಜಲು, ಶ್ರೀಕೃಷ್ಣ ಪಟೋಳಿ, ಮುದರ ಐವತ್ತೊಕ್ಲು, ವಾಚಣ್ಣ ಕೆರೆಮೂಲೆ, ಕಿಟ್ಟಣ್ಣ ಪೂಜಾರಿ ಕಾಂಜಿ,ಹೇಮಲತಾ ಚಿದ್ಗಲ್ಲು, ಮೋಹಿನಿ ಬೊಳ್ಮಲೆ , ಮೊದಲಾದವರು ಉಪಸ್ಥಿತರಿದ್ದರು. ಅಶ್ವಥ್ ರೈ ಕೆಬ್ಲಾಡಿ, ದೀಪಕ್ ಡಿಸೋಜಾ, ನಾಗಮಣಿ ಕೆದಿಲ, ಜಗದೀಶ ಕೃಷ್ಣನಗರ ನಿರ್ಣಯಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here