ಅರಂತೋಡು ಸೊಸೈಟಿಗೆ ಕೆ.ಎಮ್.ಎಫ್ ಮತ್ತು ಬಿ.ಟಿ.ಡಿ.ಸಿ. ನಿರ್ದೇಶಕ ಹಾಗು ಬೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಅಧ್ಯಯನ ಭೇಟಿ

0

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಅಧ್ಯಯನ ಪ್ರವಾಸ ನಿಮಿತ್ತ ಫೆ. ೨೭ರಂದು ಭೇಟಿ ನೀಡಿದರು. ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸ್ವಾಗತಿಸಿ ಸಂಘದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರವಾಸಿ ತಂಡವು ಸಂಘದ ದಿನಸಿ ವಿಭಾಗ, ರಸಗೊಬ್ಬರ ಮಾರಾಟ ವಿಭಾಗ ಮತ್ತು ಬ್ಯಾಂಕಿಂಗ್‌ನ ವಿಭಾಗಗಳ ಮಾಹಿತಿಯನ್ನು ಪಡಕೊಂಡರು. ಸಂಘದ ಒಟ್ಟು ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಯನ ತಂಡದಲ್ಲಿ ಬೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ, ಉಪಾಧ್ಯಕ್ಷರಾದ ನವೀನಚಂದ್ರ ಜೈನ್, ಕೆ.ಎಮ್.ಎಫ್ ಮತ್ತು ಬಿ.ಟಿ.ಡಿ.ಸಿ., ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್, ಮಾಜಿ ಅಧ್ಯಕ್ಷರು-ಹಾಲಿ ನಿರ್ದೇಶಕರು ಅವಿನಾಶ್ ಮಲ್ಲಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಆಚಾರ್ಯ, ನಿರ್ದೇಶಕರಾದ ಸಂತೋಷ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಶಾಖಾವ್ಯವಸ್ಥಾಪಕರಾದ ರೂಪಶೆಟ್ಟಿ, ದೀಪಾ ಶೆಟ್ಟಿ, ಸಿಬ್ಬಂದಿಗಳಾದ ಸೌಮ್ಯ, ಪ್ರಮೀಳ, ರಾಹುಲ್ ಮತ್ತು ನಿಖಿಲ್ ರವರು ಹಾಜರಿದ್ದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ, ಸಂಘದ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here