ನಗರದಲ್ಲಿ ನೀರಿನ ಸಮಸ್ಯೆ : ಗುತ್ತಿಗೆದಾರರ ವಿರುದ್ಧ ಆಡಳಿತ- ವಿಪಕ್ಷ ಸದಸ್ಯರ ಆಕ್ರೋಶ

0

ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದು ನೀರಿನ ಗುತ್ತಿಗೆ ವಹಿಸಿಕೊಂಡವರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಸದಸ್ಯರ ಮಾತಿಗೆ ಬೆಲೆಯೇ ಕೊಡುತ್ತಿಲ್ಲ ಎಂದು ಸುಳ್ಯ ನಗರ ಪಂಚಾಯತ್ ಆಡಳಿತ ಮತ್ತು ವಿಪಕ್ಷ ಸದಸ್ಯರು ಆಕ್ರೋಶ ವ್ಯಪ್ತ ಪಡಿಸಿದ ಘಟನೆ ಇಂದು ನ.ಪಂ. ನಲ್ಲಿ ನಡೆದಿದೆ.


ನ.ಪಂ. ನಲ್ಲಿ ಇಂದು ಬಜೆಟ್ ಮಂಡನಾ ಸಭೆ ಕರೆಯಲಾಗಿತ್ತು. ಸಭೆ ಆರಂಭಕ್ಕೂ ಮೊದಲೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಡೇವಿಡ್ ಧೀರ ಕ್ರಾಸ್ತರವರು ನನ್ನ ವಾರ್ಡ್‌ನ ಜೂನಿಯರ್ ಕಾಲೇಜು ರಸ್ತೆಯ ಸಮೀಪ ನೀರಿನ ಸಮಸ್ಯೆ ಕೆಲವು ದಿನಗಳಿಂದ ಇದೆ. ನೀರಿನ ಗುತ್ತಿಗೆ ವಹಿಸಿಕೊಂಡವರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಮೂರು ದಿನವೂ ಇದೇ ಪರಿಸ್ಥಿತಿ. ಅವರಿಗೆ ಉದಾಸಿನ ಇದೆ. ಸಮಸ್ಯೆ ಸರಿ ಪಡಿಸಬೇಕು. ನೀರು ಬಿಡುವ ಜನ ನನ್ನ ವಾರ್ಡ್‌ಗೆ ಬೇಡ ಎಂದು ಆಕ್ರೋಶಿತರಾದರು. ಆಗ ಅಧ್ಯಕ್ಷ ವಿನಯ ಕಂದಡ್ಕರು,ಈ ಸಭೆಗೆ ಬರುವ ಮೊದಲೇ ಸಮಸ್ಯೆ ಹೇಳಿದರೆ ಸರಿಪಡಿಸಬಹುದಿತ್ತು. ಇಂತ ಸಮಸ್ಯೆ ಕೆಲವು ಕಡೆ ಇತ್ತು. ಸ್ಪಂದನೆ ಕೊಟ್ಟಿzವೆ. ಇಲ್ಲಿ ಹೇಳಿದರೆ ಪೇಪರ್ ನವರು ಬರೀತಾರೆ ಅಷ್ಟೆ” ಎಂದು ಹೇಳಿದರು. ಆಗ ಮಾತನಾಡಿದ ಎಂ.ವೆಂಕಪ್ಪ ಗೌಡರು, ಅವರು ಗುತ್ತಿಗೆದಾರರಿಗೆ ಹೇಳಿದ್ದಾರೆ. ಅವರು ಸ್ಪಂದನೆ ಮಾಡಿಲ್ಲವಾದ್ದರಿಂದ ಇಲ್ಲಿ ಹೇಳಿದ್ದಾರೆ. ಇಲ್ಲಿ ಹೇಳಬಾರದು, ಪೇಪರ್‌ನವರು ಬರೀತಾರೆ ಎಂದೆಲ್ಲ ನೀವು ಹೇಳಬಾರದು” ಎಂದು ಹೇಳಿದರು.


ಸದಸ್ಯ ಬಾಲಕೃಷ್ಣ ಭಟ್ ಕೂಡಾ ಗುತ್ತಿಗೆದಾರರು ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿಕೊಂಡರೆ, ಜಯನಗರದಲ್ಲಿಯೂ ಇದೇ ಸಮಸ್ಯೆ. ಟ್ಯಾಂಕ್‌ಗೆ ಸರಿ ನೀರು ತುಂಬಿಸುತ್ತಿಲ್ಲ” ಎಂದು ಸದಸ್ಯೆ ಶೀಲ್ಪಾ ಸುದೇವ್ ಹೇಳಿದರು. ದುಗಲಡ್ಕ ವಾರ್ಡ್‌ನಲ್ಲಿ ಇದೇ ಸಮಸ್ಯೆ ಎಂದು ಬಾಲಕೃಷ್ಣ ರೈ ಹೇಳಿದರು. ರಿಯಾಜ್ ಕಟ್ಟೆಕಾರ್, ಶರಿಫ್ ಕಂಠಿ ಸಮಸ್ಯೆಯನ್ನು ಹೇಳಿಕೊಂಡರು. `’ನಾನು ನಿನ್ನೆ ನ.ಪಂ. ಗೆ ಬಂದಾಗ ಬೀರಮಂಗಲದ ಮೆಂಬರ್‌ಗೆ ನೀರಿನ ವ್ಯವಸ್ಥೆ ಮಾಡಲು ಸಾಧ್ಯಾವಗುತ್ತಿಲ್ಲ” ಎಂದು ಆ ವಾರ್ಡ್‌ನ ಸಾರ್ವಜನಿಕರೊಬ್ಬರು ಇಲ್ಲಿ ಹೇಳುತ್ತಿದ್ದರು ಎಂದು ಬೂಡು ರಾಧಾಕೃಷ್ಣ ರೈ ಹೇಳಿದರು. ”ಅಧ್ಯಕ್ಷರೆ ಈ ಸಮಸ್ಯೆ ಸರಿಪಡಿಸಬೇಕು. ಇಲ್ಲವಾದರೆ ಅವರಿಗೆ ಈಗ ನೀರಿನ ಗುತ್ತಿಗೆ ವಹಿಸಿದವರಿಗೆ ಟೆಂಡರ್ ಕೊಡುವುದೇ ಬೇಡ. ಸರಿಯಾದ ಕೆಲಸ ಮಾಡುವುದಿಲ್ಲವೆಂದು ಅವರ ಅರ್ಜಿಯನ್ನು ರಿಜೆಕ್ಟ್ ಮಾಡೋಣ” ಎಂದು ವೆಂಕಪ್ಪ ಗೌಡರು ಹೇಳಿದರು. ಉಮ್ಮರ್ ರವರು ಮಾತನಾಡಿ, ಪಂಪ್ ಹೌಸ್‌ನಿಂದ ಸರಿಯಾಗಿ ನೀರು ಬಿಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರಲ್ಲದೆ, ನೀರಿನ ಸಮಸ್ಯೆಯ ಕುರಿತು ಟೆಂಡರ್ ವಹಿಸಿದವರು ಮತ್ತು ಸಿಬ್ಬಂದಿಗಳು ಮತ್ತು ಸದಸ್ಯರ ಸಭೆ ಮಾಡಿ ಎಂದು ನಾವು ಹಲವು ಬಾರಿ ಒತ್ತಾಯಿಸಿದರೂ ಎರಡೂವರೆ ವರ್ಷದಿಂದ ಒಂದೇ ಒಂದು ಸಭೆ ಮಾಡಿಲ್ಲ'' ಎಂದು ಹೇಳಿದರು.ಹೊಸಬರಿಗೆ ಕೊಡಬಹುದು. ಆದರೆ ಅವರಿಗೆ ನೀರು ಬಿಡುವ ಕುರಿತು ಕನಿಷ್ಟ ಜ್ಞಾನ ಬೇಕಲ್ಲವೇ ಎಂದು ವಿನಯ ಕಂದಡ್ಕ ಹೇಳಿದರಲ್ಲದೆ, “ಈಗ ಇರುವವರಿಗೆ ಸರಿಯಾಗಿ ನೀರು ಬಿಡುವಂತೆ ತಿಳಿಸುತ್ತೇವೆ. ಎಲ್ಲಲ್ಲೆ ಸಮಸ್ಯೆ ಇದೆ ಅದನ್ನು ಆಗಲೇ ನಮ್ಮ ಗಮನಕ್ಕೆ ತನ್ನಿ. ಎಲ್ಲವನ್ನು ಸಭೆಗೆ ತರಬೇಡಿ. ಉಳಿದ ಸಮಯದಲ್ಲಿ ಗಮನಕ್ಕೆ ತನ್ನಿ” ಎಂದು ಅಧ್ಯಕ್ಷರು ಸದಸ್ಯರಿಗೆ ಹೇಳಿದರು.