ಅಕ್ರಮ ಮರ ಸಾಗಾಟ ಪತ್ತೆ ; ಆರೋಪಿಯ ಬಂಧನ

0

ಸಂಪಾಜೆ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆಯಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿ ಮಹಮ್ಮದ್ ಸಫ್ಯಾನ್ ಎಂಬಾತನನ್ನು ಬಂಧಿಸಿದ್ದು, ವಾಹನವನ್ನು ಹಾಗೂ ಒಟ್ಟು 12 ಹೆಬ್ಬಲಸು ಮರದ ನಾಟಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.