ಮರ್ಕಂಜ : ಅಕ್ರಮ ಮದ್ಯ ಮಾರಾಟದ ಆರೋಪಿಗೆ ನ್ಯಾಯಾಂಗ ಬಂಧನ

0

ಮರ್ಕಂಜಕ್ಕೆ ಅಕ್ರಮವಾಗಿ ರಿಕ್ಷಾದಲ್ಲಿ ಅಕ್ರಮ ಮದ್ಯ ಕೊಂಡೊಯುತ್ತಿದ್ದ ಮರ್ಕಂಜದ ವ್ಯಕ್ತಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಮರ್ಕಂಜದ ದೋಳ ನಿವಾಸಿ ಕರುಣಾಕರ ಎಂಬವರು ಮಾ.7ರ ಮಧ್ಯಾಹ್ನದ ವೇಳೆಗೆ ತನ್ನ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಕೊಂಡೊಯ್ಯುವ ಬಗ್ಗೆ ಖಚಿತ ಮಾಹಿತಿ ದೊರೆತ ಸುಳ್ಯ ಪೋಲೀಸರು ದಾಳಿ ನಡೆಸಿ ರಿಕ್ಷಾದಲ್ಲಿದ್ದ ಅಕ್ರಮ ಮದ್ಯ ಹಾಗೂ ರಿಕ್ಷಾವನ್ನು ವಶಕ್ಕೆ ಪಡೆದು ಕರುಣಾಕರರವನ್ನು ಬಂಧಿಸಿದ್ದರು. ಮಾ.8ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೋಲೀಸರು, ನ್ಯಾಯಾಂಗವು ಆರೋಪಿಗೆ ಮಾ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.