ನಿವೃತ್ತ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಡಿ.ಚಿದಾನಂದ ಗೌಡ ದೊಡ್ಡಿಹಿತ್ಲು ನಿಧನ

0

ಅಮರಮುಡ್ನೂರು ಗ್ರಾಮದ ನಿವಾಸಿ ನಿವೃತ್ತ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಡಿ.ಚಿದಾನಂದ ಗೌಡ ದೊಡ್ಡಿಹಿತ್ಲು ರವರು ಮಾ.9 ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಅವರು ಮನೆಯಲ್ಲಿ ಇರುವ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ವೈದ್ಯರ ಸಲಹೆಯ ಮೇರೆಗೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರ ಪತ್ನಿ ಶ್ರೀಮತಿ ಎಸ್.ಎ.ಮೀನಾಕ್ಷಿ ಸುಳ್ಯ ಸಿಂಡಿಕೇಟ್ ಬ್ಯಾಂಕ್ ಶಾಖೆಯ ನಿವೃತ್ತ ಉದ್ಯೋಗಿ, ಪುತ್ರರಾದ ಇಂಜಿನಿಯರ್ ಅವಿನ್ ಬೆಂಗಳೂರಿನಲ್ಲಿ ಉದ್ಯೋಗಿ, ಡಿ.ಸಿ.ನವೀನ್ ಮಂಗಳೂರಿನಲ್ಲಿ ಎಲ್.ಜಿ.ಕಂಪೆನಿ ಉದ್ಯೋಗಿ, ಪುತ್ರಿ ಶ್ರೀಮತಿ ಭಾವನಾ, ಅಳಿಯ ಶರತ್, ಸಹೋದರ ಡಿ.ಸುಲೋಚನಾ ಗೌಡ ದೊಡ್ಡಿಹಿತ್ಲು, ಸಹೋದರಿ ಶ್ರೀಮತಿ ಜಾನಕಿ ಸೋಮಶೇಖರ ಬಿಳಿಮಲೆ, ಸೊಸೆಯಂದಿರಾದ ಶ್ರೀಮತಿ ಅಭಿಜಾತೆ, ಶ್ರೀಮತಿ ಚೈತ್ರಾ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರು ಕರ್ಣಾಟಕ ಬ್ಯಾಂಕಿನ ವಿವಿಧ ಶಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2008 ರಲ್ಲಿ ಮ್ಯಾನೇಜರ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

LEAVE A REPLY

Please enter your comment!
Please enter your name here