ಗುತ್ತಿಗಾರು ಶ್ರೀ ಮಂಜುನಾಥ ಫ್ಲೈವುಡ್ ಅಂಡ್ ಗ್ಲಾಸ್ ವರ್ಕ್ ಶುಭಾರಂಭ

0

ಗುತ್ತಿಗಾರಿನ ಪಿಪಿಜಿ ಕಾಂಪ್ಲೆಕ್ಸ್‌ನಲ್ಲಿ ಸುಬ್ರಹ್ಮಣ್ಯ ಕಡ್ತಲ್‌ಕಜೆ ಮಾಲಕತ್ವದ ಶ್ರೀ ಮಂಜುನಾಥ ಫ್ಲೈವುಡ್ ಅಂಡ್ ಗ್ಲಾಸ್ ವರ್ಕ್ ಮಾ.10 ರಂದು ಶುಭಾರಂಭಗೊಂಡಿತು.


ಬೆಳಿಗ್ಗೆ ಪೂಜಾ ಕಾರ್ಯಕ್ರಮದೊಂದಿಗೆ ನೂತನ ಸಂಸ್ಥೆ ಶುಭಾರಂಭಗೊಂಡಿತು. ಗುತ್ತಿಗಾರು ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ, ಅಮರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕಟ್ಟಡ ಮಾಲಕ ಪರಶುರಾಮ ಪೂಜಾರಿಕೋಡಿ ಮೊದಲಾದವರು ಉಪಸ್ಥಿತರಿದ್ದರು.