ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡುರವರಿಗೆ ಜೈಜವಾನ್ ಜೈಕಿಸಾನ್‌ ಅವಾರ್ಡ್

0

ನಿವೃತ್ತ ಯೋಧ, ಉದ್ಯಮಿ ಹಾಗೂ ಕೃಷಿಕ ಗೋಪಾಲಕೃಷ್ಣ ಕಾಂಚೋಡುರವರು ಜೈಜವಾನ್ ಜೈಕಿಸಾನ್‌ ಅವಾರ್ಡ್ ಗೆ ಭಾಜನರಾಗಿದ್ದು, ಮಾ. 15ರಂದು ಮುಖ್ಯ ಮಂತ್ರಿಯವರಿಂದ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಒನ್ ಇಂಡಿಯಾ, ಗ್ರೇಟ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯ ಸಚಿವರು, ಭಾಗವಹಿಸಲಿದ್ದಾರೆ. ಇವರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿರುವ ಇವರು ಮೂಲತಃ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಕೆ.ಜಿ. ಸುಬ್ರಾಯ ಭಟ್ ಮತ್ತು ಶ್ರೀಮತಿ ಕೆ.ಎಸ್. ದೇವಮ್ಮ ದಂಪತಿಯ ಪುತ್ರ. 1980ರಿಂದ 1997ರ ತನಕ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯ ಬಳಿಕ ಕೃಷಿ ಉಪಕರಣಗಳ ಮಾರಾಟ ಮಳಿಗೆಯನ್ನು ನಡೆಸುತ್ತಿದ್ದರು. ಪ್ರಸ್ತುತ ಪ್ರಗತಿಪರ ಕೃಷಿಕರಾಗಿದ್ದಾರೆ.