ಮರಕತದಲ್ಲಿ 6.5 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು, ಸೇತುವೆ ಲೋಕಾರ್ಪಣೆ

0


ತೂಗು ಸೇತುವೆ ಕೇಳಿದ್ದಲ್ಲಿ ಸೇತುವೆ ನೀಡಲಾಗಿದೆ, ದೂರ ದೃಷ್ಟಿ, ದುರ್ಗಾಪರಮೇಶ್ವರಿಯ ಶಕ್ತಿ ಇದನ್ನು ಮಾಡಿಸಿತು


ನನಗೆ ಸಿಕ್ಕಿದ ಸನ್ಮಾನ ನನ್ನ ಬಿಜೆಪಿ ಪಕ್ಷಕ್ಕೆ ಸಿಕ್ಕಿದ ಸನ್ಮಾನ


ಮರಕತದ ಮೀನಿನ ರಕ್ಷಣೆಗೆ ಇನ್ನೊಂದು ಸಣ್ಣ ಅಣೆಕಟ್ಟು ಕೊಡಿಸುತ್ತೇನೆ : ಸಚಿವ ಎಸ್ ಅಂಗಾರ

ಇಂದು ನನಗೆ ಸಿಕ್ಕಿದ ಸನ್ಮಾನ ನನ್ನ ಬಿಜೆಪಿ ಪಕ್ಷಕ್ಕೆ ಸಿಕ್ಕಿದ ಸನ್ಮಾನ. ಬಿ.ಜೆ.ಪಿ ಜನರಲ್ಲಿ ಭರವಸೆ ಮೂಡಿಸಿದೆ. ಆದ ಕಾರಣ ನಮ್ಮನ್ನು ಜನ ಪ್ರಶ್ನೆ ಮಾಡುತಿದ್ದಾರೆ. ತಾಯಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಾತನಾಡ ಬೇಕಾದರೆ ಜಾಗ್ರತೆ ಬೇಕು. ತೂಗು ಸೇತುವೆ ಕೇಳಿದ್ದಲ್ಲಿ ಸೇತುವೆ ನೀಡಲಾಗಿದೆ. ನಾನು ಇಲ್ಲಿಗೆ ಭೇಟಿ ನೀಡುವಾಗ ಸೇತುವೆ ಮಾಡುವ ಮನಸ್ಸು ಇರಲಿಲ್ಲ. ಆದರೆ ಇಲ್ಲಿನ ಶಕ್ತಿ ಅದನ್ನು ಮಾಡಿಸಿತು. ಮರಕತದ ಮೀನಿನ ರಕ್ಷಣೆಗೆ ಇನ್ನೊಂದು ಸಣ್ಣ ಅಣೆಕಟ್ಟು ಕೊಡಿಸುತ್ತೇನೆ ಎಂದರು. ಹಿಂದೊಮ್ಮೆ ನಡುಗಲ್ಲಿನಲ್ಲಿ ರಸ್ತೆಗಾಗಿ ಭಾರಿ ಪ್ರತಿಭಟನೆ ನಡೆಯಿತು. ಆದರೆ ಅದನ್ನು ಯಾರಿಂದಲೂ ಮಾಡಲಾಗಲಿಲ್ಲ. ನಾವು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಾಡಿದ್ದು, ಗುತ್ತಿಗಾರು ಕಮಿಲ, ಬಳ್ಳಕ್ಕ, ದೊಡ್ಡತೋಟ ಕಲ್ಮಡ್ಕ, ದೊಡ್ಡತೋಟ ಮರ್ಕಂಜ ಹೀಗೆ ಹಲವು ರಸ್ತೆಗಳು ಗ್ರಾಮ ಸಡಕ್ ನಲ್ಲಿ ಅಭಿವೃದ್ಧಿ ಕಂಡಿವೆ. ನಮಗೆ ದೇಶದ ಬಗ್ಗೆ, ಅಭಿವೃದ್ಧಿ ಬಗ್ಗೆ, ಜನರ ಸಮಸ್ಯೆ ಬಗ್ಗೆ ಸ್ಪಷ್ಟ ಅರಿವಿದೆ ನಾವದನ್ನು ಮಾಡುತ್ತೇವೆ ಎಂದರು.


ದುಗಲಡ್ಕ ರಸ್ತೆ ಅಭಿವೃದ್ಧಿ ಮಾಡೇ ಮಾಡ್ತೇವೆ


ದುಗಲಡ್ಕ ರಸ್ತೆ ಹಿಂದೊಮ್ಮೆ ಡಾಮರೀಕರಣ ಆಗಿದೆ. ಎಲ್ಲೆಲ್ಲಿ ಹೆಚ್ಚು ರಸ್ತೆ ಕೆಟ್ಟಿದ್ಯಾ ಅಲ್ಲಿ ಮೊದಲು ಮಾಡುತ್ತೇವೆ. ೫೦ ಲಕ್ಷದ ಕೆಲಸ ಆಗಿದೆ. ಇನ್ನೂ ೫೦ ಲಕ್ಷದ ಕೆಲಸ ಆರಂಭವಾಗಿದೆ. ಕೋಡಿಯಾಲ ಬೈಲು, ದುಗಲಡ್ಕ ರಸ್ತೆಗೆ .೨.೪ ಕೋಟಿ ಪ್ರಸ್ತಾಪ ಹೋಗಿದೆ. ಸೇತುವೆಯೂ ಆಗಲಿದೆ. ಆ ರಸ್ತೆ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ಸಚಿವ ಅಂಗಾರ ನುಡಿದರು.


ಅವರು ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ೬.೫ ಕೋಟಿ ವೆಚ್ಚದ ಬೃಹತ್ತಾದ ಕಿಂಡಿ ಅಣೆಕಟ್ಟು ಹಾಗೂ ನಾಲ್ಕೂರು ಮತ್ತು ಏನೆಕಲ್ಲು ಗ್ರಾಮಗಳನ್ನು ಸಂಪರ್ಕಿಸುವ ಬೃಹತ್ ಸೇತುವೆಯನ್ನು ಇಂದು ಲೋಕಾರ್ಪಣೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡುತಿದ್ದರು. ಆರಂಭದಲ್ಲಿ ಸಚಿವ ಎಸ್ ಅಂಗಾರ ಅವರು ಸೇತುವೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ಅಧ್ಯಕ್ಷ ತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ ವಹಿಸಿದ್ದರು.


ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಭಾರತ ಸರ್ಕಾರದ ರಬ್ಬರ್ ಬೋರ್ಡ್ ಸದಸ್ಯ ಮುಳಿಯ ಕೇಶವ ಭಟ್, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕಂಟ್ರಾಕ್ಟರ್ ಪ್ರಭಾಕರ್ ಶೆಟ್ಟಿ ಕುಂದಾಪುರ, ಸಣ್ಣ ನೀರಾವರಿ ಇಂಜಿನಿಯರ್ ಹೇಮಂತ್ ಕುಮಾರ್, ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿನ್ಯಾಸ್ ಕೊಚ್ಚಿ, ಉಪಾಸನ ಸಮಿತಿ ಅಧ್ಯಕ್ಷೆ ಪಿ.ಬಿ ನಿರ್ಮಲಾ, ಗುತ್ತಿಗಾರು ಗ್ರಾ.ಪಂ ಉಪಾಧ್ಯಕ್ಷೆ ಪ್ರಮೀಳಾ ಎರ್ದಡ್ಕ, ಗ್ರಾ.ಪಂ ಸದಸ್ಯರುಗಳಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಜಗದೀಶ್ ಬಾಕಿಲ, ಲೀಲಾವತಿ ಅಂಜೇರಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಸಚಿವ ಎಸ್ ಅಂಗಾರ, ಕಂಟ್ರಾಕ್ಟರ್ ಪ್ರಭಾಕರ ಶೆಟ್ಟಿ, ಇಂಜಿನಿಯರ್ ಹೇಮಂತ್ ಕುಮಾರ್ ಅವರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ಪಾಲ್ತಾಡು ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರಶೇಖರ ಬಾಳುಗೋಡು ಸ್ವಾಗತಿಸಿದರು. ಹರೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ವಿಜಯ ಚಾರ್ಮತ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.