ಏನೆಕಲ್ಲು : ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಏನೆಕಲ್ಲು, ಬಳ್ಪ, ಕೇನ್ಯ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮ ಮಾ. 14ರಂದು ಸುಬ್ರಹ್ಮಣ್ಯ ಕ್ಷೇತ್ರದ ತಾ. ಪಂ. ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರ ಫಾರ್ಮ್ ಹೌಸ್ ನಲ್ಲಿ ನಡೆಯಿತು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಆಹ್ವಾನಿತರಾಗಿ ಆಗಮಿಸಿದ ಕೆಪಿಸಿಸಿ ಉಸ್ತುವಾರಿ ನಂದಕುಮಾರ್ ಹೆಚ್ ಮಾಹಿತಿ ನೀಡಿದರು. ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಾನಡ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಪಿಎಸ್,

ಬಳ್ಪ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಕಾಂತ ಎಂಎಂ, ಯಶೋದರ ಗೆಜ್ಜೆ, ಸಂತೋಷ್ ರೈ ಪಳ್ಳತ್ತಡ್ಕ, ಹರೀಶ್ ಪೂಜಾರಿಮನೆ, ಪ್ರಶಾಂತ್ ಕಾರ್ಜ, ಜಯರಾಮ ಸಂಪ್ಯಾಡಿ, ಕೃಷ್ಣರಾಜ ಚೊಕ್ಕಾಡಿ, ಪುರುಷೋತ್ತಮ ಪರಮಲೆ, ಲೋಕೇಶ್ ಅಮೈ, ನಿತಿನ್ ಮತ್ತಿತರರು ಸಭೆಯಲ್ಲಿ ಉಪಸಿತರಿದ್ದರು. ಅಶೋಕ್ ನೆಕ್ರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ್ ಎಂಎಂ ವಂದಿಸಿದರು.