ಸುಳ್ಯದ ಕುರುಂಜಿಭಾಗ್ ಬಳಿ ಒಡೆದು ಹೋಗಿರುವ ಚರಂಡಿ ಸ್ಲಾಬ್‌ಗಳು

0

ಪಾದಾಚಾರಿಗಳಿಗೆ ಸಂಕಷ್ಟಸುಳ್ಯ ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಕುರುಂಜಿ ಬಾಗ್ ಬಳಿ ನ್ಯಾಯಾಧೀಶರ ಹಳೆ ವಸತಿಗೃಹದ ಸಮೀಪ ರಸ್ತೆ ಬಳಿ ಇರುವ ಚರಂಡಿಯ ಸ್ಲಾಬ್ ಕಲ್ಲುಗಳು ಸಂಪೂರ್ಣವಾಗಿ ಒಡೆದು ಹೋಗಿದ್ದು, ಬೃಹತ್ ರಂಧ್ರಗಳು ಸೃಷ್ಟಿಯಾಗಿದೆ.
ಈ ಭಾಗದಲ್ಲಿ ಕೆವಿಜಿ ಕ್ಯಾಂಪಸ್ ಇದ್ದು ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ. ರಸ್ತೆಯಲ್ಲಿ ವಾಹನಗಳು ಬರುವ ಸಂದರ್ಭ ಕಣ್ತಪ್ಪಿ ಫುಟ್ಪಾತಿನ ಮೇಲೆ ಜನರು ಬಂದರೆ ಈ ಸ್ಲಾಬ್ಗಳ ಬೃಹತ್ ರಂಧ್ರಗಳಲ್ಲಿ ಕಾಲುಗಳು ಸಿಲುಕಿಕೊಳ್ಳುವುದು ಖಂಡಿತ. ಈ ಘಟನೆ ನಡೆದು ಅದೆಷ್ಟೇ ದಿನಗಳಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.