ಸುಳ್ಯ ಪ್ರೆಸ್ ಕ್ಲಬ್ ಗೆ ಬೆಳ್ಳಾರೆಯ ಗ್ಲೋಬಲ್ ಸರ್ವಾಲೆನ್ಸ್ ನವರಿಂದ ಸಿಸಿ ಕ್ಯಾಮೆರಾ ಕೊಡುಗೆ – ಉದ್ಘಾಟನೆ

0

ಸುಳ್ಯದ ಅಂಬೆಟಡ್ಕದಲ್ಲಿರುವ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಬೆಳ್ಳಾರೆಯ ಗ್ಲೋಬಲ್ ಸರ್ವಾಲೆನ್ಸ್ ನವರು ಸಿಸಿ ಕ್ಯಾಮೆರಾ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನಾ ಸಮಾರಂಭ ಮಾ.15 ರಂದು ಸಂಜೆ ನಡೆಯಿತು.

ಸುಳ್ಯ ಠಾಣಾ ಕ್ರೈಂ ಎಸ್.ಐ ಶಾಹಿದ್ ಆಫ್ರಿದಿರವರು ನೂತನ ಸಿಸಿ ಕ್ಯಾಮೆರಾವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ಸಂದರ್ಭ ಗ್ಲೋಬಲ್ ಸರ್ವಾಲೆನ್ಸ್ ಮಾಲಕ ರಾಕೇಶ್ ರೈ ಬೆಳ್ಳಾರೆಯವರನ್ನು ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಾನಪದ ಸಂಶೋಧಕ ಡಾ. ಸುಂದರ ಕೇನಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ನಿರ್ದೇಶಕರು, ಸದಸ್ಯರು ಸೇರಿದಂತೆ ಸದಸ್ಯರ ಮನೆಯವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಗಂಗಾಧರ ಕಲ್ಲಪಲ್ಲಿ ಸ್ವಾಗತಿಸಿ, ಕೋಶಾಧಿಕಾರಿ ಯಶ್ವಿತ್ ಕಾಳಮ್ಮನೆ ವಂದಿಸಿದರು.