ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಡಿಗೆ ಪಾವತಿ ಬಾಕಿ

0

ಚೆಕ್ ಬೌನ್ಸ್ ಆರೋಪಿ ಜೈಲಿಗೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಂಗಡಿಯನ್ನು ಬಾಡಿಗೆ ಪಡೆದು ಬಾಡಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನೀಡಿದ ಚೆಕ್ ಬೌನ್ಸ್ ಆಗಿ ಸುಬ್ರಹ್ಮಣ್ಯದ ಶೈಲೇಶ್ ಯಾನೆ ನವೀನ್ ಜೈಲುಪಾಲದ ಘಟನೆ ವರದಿಯಾಗಿದೆ.

ಆರೋಪಿ 2016 ರಲ್ಲಿ ಎಲಂ ನಲ್ಲಿ ದೇವಸ್ಥಾನದಿಂದ ಅಂಗಡಿ ಪಡೆದುಕೊಂಡಿದ್ದರು. ಬಾಡಿಗೆ ಪಡೆದು ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಅದು ಸುಮಾರು 76 ಲಕ್ಷ ದಷ್ಟಿದ್ದು ಇದಕ್ಕೆ ಸಂಬಂಧಿಸಿ ದೇವಸ್ಥಾನಕ್ಕೆ ಚೆಕ್ ನೀಡಲಾಗಿತ್ತು. ಚೆಕ್ ಬೌನ್ಸ್ ಆಗಿ ಕೇಸು ದಾಖಲಾಗಿದ್ದು ಅದರಂತೆ ಸುಳ್ಯ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿದಿಸಿತ್ತು . ಇದನ್ನು ಪ್ರಶ್ನಿಸಿ ಶೈಲೇಶ್ ಪುತ್ತೂರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಜೈಲು ಶಿಕ್ಷೆ ಖಾಯಂ ಆಗಿದ್ದು ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ದೇವಸ್ಥಾನದ ಪರವಾಗಿ ನ್ಯಾಯವಾದಿ ಸುಧಾಕರ ನೆಟ್ಟಾರು ವಾದಿಸಿದ್ದರು.