ಸುಳ್ಯ ನ್ಯಾಯಾಲಯದ ಬಳಿ ವಿದ್ಯುತ್ ಕಂಬಕ್ಕೆ ಆವರಿಸಿಕೊಂಡಿರುವ ಮರದ ರೆಂಬೆಗಳು

0

ಸುಳ್ಯ ನ್ಯಾಯಾಲಯದ ಮುಖ್ಯ ದ್ವಾರದ ಬಳಿ ರಸ್ತೆಯಲ್ಲಿ ಇರುವ ಬೃಹತ್ ಮರದ ಗೆಲ್ಲುಗಳು ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಆವರಿಸಿ ಅಪಾಯವನ್ನು ಕೈಬೀಸಿ ಕರೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.

ಕುರಂಜಿಭಾಗ್ ಮೂಲಕ ಕುರುಂಜಿಗುಡ್ಡೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮರದ ಕಟ್ಟೆ ಇದ್ದು ಮರದ ರೆಂಬೆಗಳು ಅಲ್ಲೇ ಪಕ್ಕದಲ್ಲಿರುವ ಎರಡು ವಿದ್ಯುತ್ ಕಂಬಗಳನ್ನು ಮತ್ತು ವಿದ್ಯುತ್ ತಂತಿಗಳನ್ನು ಆವರಿಸಿಕೊಂಡಿದೆ.

ಒಂದು ಕಂಬದಲ್ಲಿ ಎಲೋಜಿನ್ ಬೀದಿ ದೀಪ ಅಳವಡಿಸಲಾಗಿದ್ದು ರಾತ್ರಿ ಸಮಯ ಈ ದೀಪದ ಬೆಳಕು ರಸ್ತೆಗೆ ಬೀಳುತ್ತಿಲ್ಲ.ಈ ಪರಿಸರದಲ್ಲಿ ಸುತ್ತಲೂ ಬೇರೆ ಬೇರೆ ಇಲಾಖೆಗಳ ಕಚೇರಿಗಳಿದ್ದು ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಇಲಾಖಾ ಅಧಿಕಾರಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಿರುತ್ತಾರೆ. ಆದರೂ ಕೂಡ ಇತ್ತ ಯಾರು ಗಮನಹರಿಸುವುದಿಲ್ಲ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

ವರ್ಷಗಳಿಂದ ಪೋಲಾಗುತ್ತಿರುವ ನಗರ ಪಂಚಾಯತಿನ ಕುಡಿಯುವ ನೀರು:

ಅದೇ ರೀತಿ ಅಲ್ಲೇ ಪಕ್ಕದಲ್ಲಿ ಕುಡಿಯುವ ನೀರಿನ ಬೋರ್ವೆಲ್ ಇದ್ದು ಅದರ ಬಳಿ ಕಳೆದ ಒಂದು ವರ್ಷಗಳಿಂದ ಹೆಚ್ಚಿನ ನೀರು ಪೋಲಾಗಿ ರಸ್ತೆಗೆ ಹೋಗುತ್ತಿದೆ.
ಸ್ಥಳೀಯರ ಪ್ರಕಾರ ಪರಿಸರದ ವಾರ್ಡುಗಳಿಗೆ ಸಂಪರ್ಕಿಸುವ ನೀರಿನ ಪೈಪ್ ಈ ಬೋರ್ವೆಲ್ ಗೆ ಅಳವಡಿಸಲಾಗಿದ್ದು ಅದರ ಪೈಪ್ ಒಡೆದು ಹೋಗಿದ್ದು ಅಲ್ಲೇ ಬೃಹತ್ ಹೋಂಡ ನಿರ್ಮಾಣವಾಗಿದೆ. ಪೈಪಿನಿಂದ ಸೋರುವ ನೀರು ಹೊಂಡದಲ್ಲಿ ತುಂಬಿ ರಸ್ತೆಗೆ ಹರಿಯುತ್ತಿದೆ ಎಂದು ಹೇಳುತ್ತಿದ್ದಾರೆ.