ಸುಬ್ರಹ್ಮಣ್ಯ: ಗಾಂಗೇಯ ಕ್ರಿಕೆಟ್ ಪಂದ್ಯಾಟ, ಪ್ರಥಮ: ಚಕ್ರವರ್ತಿ ಎಣ್ಮೂರು, ಸ್ವಸ್ತಿಕ್ ಪಡ್ಡಯೂರು ದ್ವಿತೀಯ

0

ಗಾಂಗೇಯ ಕ್ರಿಕೇಟರ್ಸ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ದಿ.ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥ ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ೨೦ ತಂಡಗಳ ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ- ೨೦೨೩ ರ ನಡೆಯಿತು. ಮಾ.11 ರಂದು ನಡೆಯಿತು. ಪ್ರಥಮ ಸ್ಥಾನವನ್ನು ಚಕ್ರವರ್ತಿ ಎಣ್ಮೂರು ತಂಡ ಹಾಗೂ ದ್ವಿತೀಯ ಸ್ಥಾನವನ್ನು ಸ್ವಸ್ತಿಕ್ ಪಡ್ಡಯೂರು ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ
ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಿ.ಬಿ.ಹರಿಪ್ರಸಾದ್ ರೈ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು ಕಲಾವಿದ ಯಜ್ಞೇಶ್ ಆಚಾರ್ ಗೌರವಾರ್ಪಣೆ ಮಾಡಿದರು.
ಇದೇ ಸಂದರ್ಭ ಸಹಕಾರ ನೀಡಿದ ನಿರ್ಣಾಯಕರಾದ ಹರೀಶ್ ಪಡೀಲ್, ಮೋಹನ್ ಯಯ್ಯಾಡಿ, ಸುರೇಶ್ ಬೆದ್ರ ವೀಕ್ಷಕ ವಿವರಣೆ ಮಾಡಿದ ಸುಕುಮಾರ್ ಬೆಂಗಳೂರು, ಸತೀಶ್ ಮಂಗಳೂರು, ಗೋಪಿ ಮಂಗಳೂರು ಅವರುಗಳನ್ನು ಗೌರವಿಸಲಾಯಿತು. ಭರತೇಶ್ ಸುಬ್ರಹ್ಮಣ್ಯ, ಗಾಂಗೇಯದ ಕೃಷ್ಣ ಮಣಿಯಾಣಿ, ಶೇಷಕುಮಾರ್ ಶೆಟ್ಟಿ, ಚಂದ್ರಶೇಖರ್ ಅಗ್ರಹಾರ, ರಾಘವ ಕುಮಾರಧಾರ, ಗುರುವ ಕುಮಾರಧಾರ, ಸುಬ್ರಹ್ಮಣ್ಯ ಮಾನಾಡು, ಹರ್ಷಿತ್ ಎಸ್, ಕೃಷ್ಣಪ್ಪ ಸ್ಕಂಧ, ಹಿರಿಯ ಛಾಯಾಗ್ರಾಹಕ ರಾಮ್‌ಕುಮಾರ್, ಬ್ಯಾಂಡ್ ವ್ಯವಸ್ಥೆ ಮಾಡಿದ ಕಲಾವಿದ ಶ್ರುತನ್ ಸುಬ್ರಹ್ಮಣ್ಯ, ಟೆನ್ ಮೀಡಿಯಾ, ಅಕ್ಷರಾ ಕ್ರಿಕೆಟರ್ಸ್ ಅಶ್ವಮೇಧ ಕ್ರಿಕೇಟರ್ಸ್, ಆದಿಶ್ರೀ ಕ್ರಿಕೇಟರ್ಸ್, ನಂದಿವಿಷ್ಣು ಕ್ರಿಕೇಟರ್ಸ್ ಅವರನ್ನು ಗೌರವಿಸಲಾಯಿತು.

 ಗಾಂಗೇಯ ಕ್ರಿಕೇಟರ್ಸ್ ನ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಉಮೇಶ್ ಕೆ.ಎನ್, ಗಾಂಗೇಯ ತಂಡದ ಹಿರಿಯ ಆಟಗಾರ ಎಂ. ಹರೀಶ್ ಕಾಮತ್, ನಿವೃತ್ತ ಮುಖ್ಯ ಗುರು ಮತ್ತು ಹಿರಿಯ ಕ್ರಿಕೇಟ್ ಆಟಗಾರ ಶ್ರೀಕೃಷ್ಣ ಶರ್ಮ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್,  ಗಾಂಗೇಯ ತಂಡದ ಮಾಜಿ ನಾಯಕ ದಿನೇಶ್ ಬಿ.ಎನ್, ಹಿರಿಯ ಆಟಗಾರರಾದ ಗಿರಿಧರ್ ಸ್ಕಂಧ, ವೇಣುಗೋಪಾಲ ಎನ್.ಎಸ್, ಕ್ರೀಡಾಪ್ರೋತ್ಸಾಹಕ ಪ್ರಸಾದ್ ರೈ ಸೇನಾನಿ, ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿ ಗಂಗಾಧರ ಹೊಸ್ಮಠ, ಉದ್ಯಮಿ ಹರಿಪ್ರಸಾದ್ ನಾಯರ್ ಮಲ್ಲಾಜೆ ಮುಖ್ಯತಿಥಿಗಳಾಗಿದ್ದರು.ತಂಡದ ನಾಯಕ ಮಹೇಶ್ ಕುಮಾರ್ ಎಸ್, ಹಿರಿಯ ಆಟಗಾರ ನವೀನ್ ಮಣಿ, ಮಾಜಿ ನಾಯಕ ಪ್ರಕಾಶ್ ಸುಬ್ರಹ್ಮಣ್ಯ, ಜೇಸಿಸ್ ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್ ಗಾಂಗೇಯ ವೇದಿಕೆಯಲ್ಲಿದ್ದರು. 

ಗಾಂಗೇಯ ತಂಡದ ಮಾಜಿ ಕಪ್ತಾನ ಮತ್ತು ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿದರು.ಗಾಂಗೇಯ ತಂಡದ ಪವನ್ ಕೇದಿಗೆಬನ ಪ್ರಶಸ್ತಿ ಪತ್ರ ವಾಚಿಸಿದರು. ಸುಕುಮಾರ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಗಾಂಗೇಯ ತಂಡದ ಸದಸ್ಯರು, ಕ್ರೀಡಾಳುಗಳು, ಕ್ರೀಡಾಪ್ರೋತ್ಸಾಹಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.