ಅಮರಪಡ್ನೂರು ಸರಕಾರಿ (ಅಜ್ಜನಗದ್ದೆ) ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಅಮರಪಡ್ನೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳವು ಮಾ.17 ರಂದು ನಡೆಯಿತು.
ನಿವೃತ್ತ ಪ್ರಾಂಶುಪಾಲರು ಶ್ರೀಮತಿ ಶೀಲಾವತಿ ಕೊಳಂಬೆ,
ಪಂ.ಸದಸ್ಯರಾದ ಶ್ರೀಮತಿ ಭುವನೇಶ್ವರಿ ,ಶ್ರೀಮತಿ ಸೀತಾ ಹೆಚ್ ಮಕ್ಕಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಎಸ್. ಡಿ. ಎಮ್ .ಸಿ.ಅಧ್ಯಕ್ಷ ರು,ಸದಸ್ಯರು,ಶಿಕ್ಷಕರು,ಪೋಷಕರು ಹಾಜರಿದ್ದು ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಮಕ್ಕಳು ತಾವೇ ತಯಾರಿಸಿದ ಪಾನೀಯಗಳು, ಮನೆಯಲ್ಲಿ ತಯಾರಿಸಿದ ತಿಂಡಿಗಳು, ತರಕಾರಿ, ಹಣ್ಣಿನ ಉತ್ಪನ್ನ ಗಳನ್ನು ಮಾರಾಟ ಮಾಡಿದರು.
ಶಿಕ್ಷಕ ಶಿವಕುಮಾರ್
ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here