ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಗಳ ನೌಕರರ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ ಕಾರ್ಯಕ್ರಮ

0

ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟ ಸುಳ್ಯ, ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಾರ್ಷಿಕ ಮಹಾಸಭೆಯು ಮಾ.18ರಂದು ಸಂಘದ ಅಧ್ಯಕ್ಷ ಚಂದ್ರ ಬೊಮ್ಮಾರು ಇವರ ಅಧ್ಯಕ್ಷತೆಯಲ್ಲಿ ಸುಳ್ಯದ ವೆಂಕಟ್ರಮಣ ಸೊಸೈಟಿ ಯ ಮದುವೆಗದ್ದೆ ಶ್ರೀ ಭೋಜಪ್ಪ ಗೌಡ ವೇದಿಕೆಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಗಳ ನೌಕರರ ಸಂಘದ ಅಧ್ಯಕ್ಷ ಸುನಿಲ್ ಕಡ್ಲೆರ್ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಗಳ ನೌಕರರ ಟ್ರಸ್ಟ್ ಇದರ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಗಳ ನೌಕರರ ಒಕ್ಕೂಟ ಮಂಗಳೂರು ಇದರ ಕಾರ್ಯದರ್ಶಿ ಕಿಶೋರ್, ತಾಲೂಕು ಸಂಘದ ಕಾರ್ಯದರ್ಶಿ ಮಹೇಂದ್ರ ಕನಕಮಜಲು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾಗಿ, ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊ‌ಂದಿದ ಬಾಲಸುಬ್ರಹ್ಮಣ್ಯ ಭಟ್ ಕಾನತ್ತೂರು ಇವರನ್ನು ಹಾಗೂ ನಿವೃತ್ತ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿ ಹಿರಿಯಣ್ಣ ಸ್ವಾಗತಿಸಿದರು.

LEAVE A REPLY

Please enter your comment!
Please enter your name here