ಆಲೆಟ್ಟಿ ದಿ. ಕಮಲ ರವರ ಉತ್ತರ ಕ್ರಿಯಾದಿ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಪಂಜಿಮಲೆ ನಿವಾಸಿ ದಿ.ಕೃಷ್ಣ ಬಂಟರ ಧರ್ಮ ಪತ್ನಿ ಶ್ರೀಮತಿ ಕಮಲ ರವರು ಮಾ.6 ರಂದು ಸ್ವಗೃಹದಲ್ಲಿ ದೈವಾಧೀನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವು ಮಾ.17 ರಂದು ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.


ಮೃತರ ಬಗ್ಗೆ ಮಾತನಾಡಿದ ಅಗ್ರ ಕುಟುಂಬದ ಪ್ರಕಾಶ್ ನಾಯ್ಕ್ ಆಲಿಕೋಡಿ ಮತ್ತು ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುಂಡ್ಯ ಮನೆತನದ ಹಿರಿಯರಾದ ಶಿವರಾಮ ರೈ ಗುಂಡ್ಯ ಹಾಗೂ ಮೃತರ ಪುತ್ರರಾದ ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ, ಪ್ರಗತಿಪರ ಕೃಷಿಕ ಅಳಿಯ ಪುರಂದರ ನಾಯ್ಕ್ ಅಡೂರು, ಪುತ್ರಿ ಯರಾದ ಶ್ರೀಮತಿ ಸರೋಜಿನಿ ಅಡೂರು, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಸೊಸೆಯಂದಿರಾದ ಆಶಾ ಕಾರ್ಯಕರ್ತೆ ಶ್ರೀಮತಿ ಉಷಾ ಕಿರಣ , ಶ್ರೀಮತಿ ವಿಜಯ ,ಶ್ರೀಮತಿ ನವ್ಯಾ ಮತ್ತು ಮೊಮ್ಮಕ್ಕಳು, ಮರಿಮಕ್ಕಳು, ಅಗ್ರ ಕುಟುಂಬದ ಹಿರಿಯ ಕಿರಿಯ ಬಂಧು ವರ್ಗದವರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಹಿತೈಷಿಗಳು ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.

LEAVE A REPLY

Please enter your comment!
Please enter your name here