ರೋಟರಿ ವಿದ್ಯಾಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ

0

ಮಾರ್ಚ್ 15 ರಂದು ರೋಟರಿ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ ಸಮಾರಂಭ ನಡೆಯಿತು.
ಸಭಾಧ್ಯಕ್ಷತೆಯನ್ನು ರೋಟರಿ ಸುಳ್ಯದ ಅಧ್ಯಕ್ಷರಾದ ರೊ.ಚಂದ್ರಶೇಖರ್ ಪೇರಾಲ್ ರವರು ವಹಿಸಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಮಕ್ಕಳಿಗೆ ಶುಭ ಹಾರೈಸಿದರು .
ಆಡಳಿತ ಮಂಡಳಿಯ ಸದಸ್ಯರಾದ ರೊ. ಬೆಳ್ಯಪ್ಪ ಗೌಡ ಹಾಗೂ ರೊ.ಮಹಾಲಕ್ಷ್ಮಿ ಕೋರಂಬಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

9ನೇ ತರಗತಿಯ ವಿದ್ಯಾರ್ಥಿಗಳಾದ ಫಾತಿಮತ್ ಫಾಯಿಝ, ಗಗನ್, ಹರ್ಷಿತ್ ಎ. ಎಸ್ . ಸಿಂಚನ ಎನ್.ಪಿ , ಪ್ರಸನ್ನ. ಪಿ. , ಶ್ರವಣ್ ಯು. ಎ. ಹತ್ತನೇ ತರಗತಿಯ ವಿದ್ಯಾರ್ಥಿ ಗಳಾದ ಧನುಷ್. ಕೆ. , ವೈಷ್ಣವಿ.ಶೆಟ್ಟಿ, ಮೊಹಮ್ಮದ್ ನಿಝಾಫರ್ , ಕೀರ್ತನಾ ಸಿ ವಿ, ಸನಿಹ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶಿಕ್ಷಕಿ ಕು.ರಮ್ಯ ಸ್ವರಚಿತ ಕವನ ವಾಚನದೊಂದಿಗೆ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ವರ್ಣಿಸಿದರೆ ಶಿಕ್ಷಕಿ ಕು.ಪಲ್ಲವಿ ವಿದ್ಯಾರ್ಥಿಗಳಿಗೆ ಸವಿ ಮಾತಿನ ಹಿತನುಡಿಗಳನ್ನಾಡಿದರು.

ನಂತರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದ ಹತ್ತನೇ ತರಗತಿಯ ವಿದ್ಯಾರ್ಥಿನಿ ಕು. ಅನನ್ಯ ಕೆ.ಬಿ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಒಂಭತ್ತನೇ ತರಗತಿಯ ವಿದ್ಯಾ ರ್ಥಿನಿ ಕು. ಪ್ರಣಮ್ಯ ಆಳ್ವ ಇವರೀರ್ವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here