ನಾಲ್ಕೂರಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

0

ಸ್ಥಳದಲ್ಲೇ ಹಲವು ಅರ್ಜಿಗಳಿಗೆ ಪರಿಹಾರ – ಕೆಲವು ಅರ್ಜಿಗಳ ವಿಲೇಗೆ ಗಡುವು ನೀಡಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ರವಿ ಕುಮಾರ್

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾ.೧೮ರಂದು ಹಾಲೆಮಜಲು ಸಭಾಭವನದಲ್ಲಿ ನಡೆಯಿತು. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ರವರು ಬಂದ ಅರ್ಜಿಗಳನ್ನು ಓದಿ ಪರಿಹಾರ ಸೂಚಿಸಿದರು. ಸಂಧ್ಯಾ ಸುರಕ್ಷ, ವಿಧವಾ ವೇತನ ಇತ್ಯಾಧಿ ಅರ್ಜಿಗಳಿಗೆ ೫ ನಿಮಿಷದಲ್ಲಿ ಆದೇಶ ಪತ್ರ ಹಸ್ತಾಂತರಿಸಿದರು. ದಾರಿ ಸಮಸ್ಯೆ, ಮನೆ ದುರಸ್ತಿ ಇತ್ಯಾದಿ ಅರ್ಜಿಗಳಿಗೆ ಗಡುವು ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಜಿ ಹಿಡಿದು ಬಂದ ಪಲಾನುಭವಿಗಳನ್ನು ತಮ್ಮ ಪಕ್ಕದಲ್ಲೇ ಚಯರ್ ಹಾಕಿ ಕುಳಿತುಕೊಳ್ಳುವಂತೆ ಸೂಚಿಸಿ ಅದಕ್ಕೆ ಪರಿಹಾರ ನೀಡುತ್ತಿದ್ದರು. ಅಧಿಕಾರಿಗಳನ್ನು ಕರೆದು ಪರಿಹಾರ ನೀಡದಿರುವ ಕುರಿತು ವಿಚಾರಿಸುತ್ತಿದ್ದರು.


ಜಿಲ್ಲಾಧಿಕಾರಿಗಳು ಸಭೆಗೆ ಬರುವಾಗ ಮಧ್ಯಾಹ್ನ ೧೨ ಗಂಟೆ ಆಗಿತ್ತು. ಆರಂಭದಲ್ಲಿ ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ರವರು ಸಬೆಯನ್ನು ನಡೆಸಿಕೊಟ್ಟರು. ಬಳಿಕ ಸಭೆಗೆ ಆಗಮಿಸಿದ ಎಡಿಸಿ ಕೃಷ್ಣ ಮೂರ್ತಿಯವರು ಸಭೆಗೆ ಬಂದ ಅರ್ಜಿಗಳ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ, ಉಪಾಧ್ಯಕ್ಷೆ ಪ್ರಮೀಳಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು. ನೂರಾರು ಸಂಖ್ಯೆಯಲ್ಲಿ ಗ್ರಾಮ ಸ್ಥರು ಸೇರಿದ್ದರು.

LEAVE A REPLY

Please enter your comment!
Please enter your name here