ಬೊಳುಬೈಲು ಶಾಲಾಭಿವೃದ್ಧಿಯ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕು ಜಾಲ್ಸೂರು ವಲಯದ ಬೊಳುಬೈಲು ಶಾಲೆಗೆ ಅಭಿವೃದ್ಧಿಯ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 75,000 ಬಂದಿರುತ್ತದೆ.
ಈ ಮಂಜೂರಾತಿ ಚೆಕ್ ಅನ್ನು ಸುಳ್ಳು ತಾಲೂಕು ಯೋಜನಾಧಿಕಾರಿಯದ ನಾಗೇಶ್ ರವರು ಶಾಲಾ ಮುಖ್ಯೋಪಾಧ್ಯಾಯರಾದ ರಾಧಮ್ಮ ಹಾಗೂ ಸಹಶಿಕ್ಷಕಿ ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಸುಬ್ರಮಣ್ಯ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ವಲಯದ ಮೇಲ್ವಿಚಾರಕರಾದ ತೀರ್ಥರಾಮ ಬೊಳುಬೈಲು, ಒಕ್ಕೂಟದ ಅಧ್ಯಕ್ಷ ಪದ್ಮನಾಭ ನೆಕ್ರಾಜೆ, ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಜಯಂತಿ, ಕೇಂದ್ರ ಒಕ್ಕೂಟದ ಕೋಶಾಧಿಕಾರಿ ವೇದ ಹರೀಶ್ ಶೆಟ್ಟಿ, ಜಾಲ್ಸೂರು ವಲಯದ ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಜಯಪ್ರಕಾಶ್ ಬೈತಡ್ಕ, ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಗೋಪಿನಾಥ್, ಸ್ಥಳೀಯ ನವಚೇತನ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here