ಅಯ್ಯನಕಟ್ಟೆ ಜಾತ್ರೋತ್ಸವ ಲೆಕ್ಕಪತ್ರ ಮಂಡನಾ ಸಭೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಅಯ್ಯನಕಟ್ಟೆ ಜಾತ್ರೋತ್ಸವದ ಲೆಕ್ಕಪತ್ರ ಮಂಡನೆಗೆ ಸಂಬಂಧಿಸಿದ ಸಭೆ ಮಾ. 18ರಂದು ಮೂರುಕಲ್ಲಡ್ಕದಲ್ಲಿ ನಡೆಯಿತು.

ಸಮಿತಿಯ‌ ವಿಶ್ವಸ್ಥರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ, ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಕೋಶಾಧಿಕಾರಿ ಸತೀಶ್ ಕಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಪ್ರಸಾದ ಕಾಂಚೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ವಾಸುದೇವ ಆಚಾರ್ಯ ಸ್ವಾಗತಿಸಿದರು. ಭಕ್ತಾದಿಗಳು ಸಭೆಯಲ್ಲಿ ಹಾಜರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.