ಸಂಪಾಜೆ ಗ್ರಾಮದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗ್ರಾ.ಪಂ‌ ಅಧ್ಯಕ್ಷ ಜಿ ಕೆ ಹಮೀದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಭೇಟಿ, *ಸಂಪಾಜೆಗೆ ಅಧಿಕಾರಿಗಳ ಆಗಮನ*

0

ಸಂಪಾಜೆ ಗ್ರಾಮದ ಪ್ರಮುಖ ಸಮಸ್ಯೆಗಳಾದ ನದಿಗಳ ಹೂಳೆತ್ತುವಿಕೆ, ಅಡಿಕೆ ಹಳದಿ ರೋಗದಿಂದ ಕೃಷಿಕರಿಗೆ ಆಗಿರುವ ತೊಂದರೆ, ನದಿಗಳಿಗೆ ತಡೆಗೋಡೆ ನಿರ್ಮಾಣ, ಪ್ಲಾಟಿಂಗ್ ಸಮಸ್ಯೆ, ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಗುರುತು,ಕಳೆದ ಮಳೆಗಾಲದಲ್ಲಿ ಆಗಿರುವ ಘಟನೆಗಳ ಕುರಿತುಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ನೇತೃತ್ವದಲ್ಲಿ ಸಂಪಾಜೆ ಗ್ರಾಮಸ್ಥರ ನಿಯೋಗ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಸಮಸ್ಯೆಗಳ ‌ಬಗ್ಗೆ ಗಮನ ಸೆಳೆದರು.

ಗ್ರಾಮ ವಾಸ್ತವ್ಯಕ್ಕಾಗಿ ನಾಲ್ಕೂರು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಭೇಟಿಯಾಗಿ ಮನವಿ ನೀಡಿದರು.ಕೃಷಿಕರಾದ ಕೊಂದಲಕಾಡು ನಾರಾಯಣ ಭಟ್, ರವಿಶಂಕರ್ ಭಟ್, ಸತ್ಯನಾರಾಯಣ ಭಟ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಯುವ ಮುಖಂಡ ರಹೀಮ್ ಬೀಜದಕಟ್ಟೆ, ರವಿಶಂಕರ ಭಟ್ ನಿಯೋಗದಲ್ಲಿದ್ದರು ಕೃಷಿಕರ ಸಮಸ್ಯೆ ಬಗ್ಗೆ ರವಿಶಂಕರ್ ಭಟ್ ಗಮನ ಸೆಳೆದರು,ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಅಧಿಕಾರಿಗಳ ಭೇಟಿ :

ಬೆಳಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮ ಸಂಪಾಜೆಯ ನದಿಯಲ್ಲಿ ಹೂಳು ತುಂಬಿದ ವಿಚಾರದ ಪರಿಶೀಲನೆ ಗೆ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.ಸಂಪಾಜೆ ಅಧ್ಯಕ್ಷ ಜಿ.ಕೆ. ಹಮೀದ್ ರವರು ಅಧಿಕಾರಿಗಳಿಗೆ ಸಮಸ್ಯೆಯ ಕುರಿತು ವಿವರ ನೀಡಿದ್ದಾರೆ.