ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ, *ದೈವಾರಾಧನೆಯಿಂದ ಅಭಿವೃದ್ದಿಗೆ ಸಾಕಾರ : ಶ್ಯಾಮ್ ಪ್ರಸಾದ್ ಎಂ.ಆರ್

0

“ಎಲ್ಲಾ ಆಚರಣೆಗಳಿಗೆ ಮೌಲ್ಯವಿದೆ.ಆಚರಣೆಗಳು ನಂಬಿಕೆಯ ಮೇಲೆ ನಡೆಯುತ್ತದೆ. ದೈವಶಕ್ತಿ ನಂಬಿಕೆಗಳು ನಮಗೆ ಭರವಸೆ ಕೊಡುತ್ತದೆ.ನಮ್ಮನ್ನು ಕಾಯುವ ದೇವರಿದ್ದಾರೆ ಎನ್ನುವ ಭಾವನೆಯಿಂದ ನಾವು ಬದುಕುತ್ತೇವೆ.ಆರಾಧನೆಯಿಂದ ನಮ್ಮನ್ನು ನಾವು ಎಚ್ಚರಿಸಿಕೊಳ್ಳುತ್ತೇವೆ.” ದೈವ ದೇವರುಗಳ ಆರಾಧನೆಯಿಂದ ಅಭಿವೃದ್ಧಿಗೆ ಸಾಕಾರವಾಗುತ್ತದೆ ಎಂದು ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ.ಆರ್ ರವರು ಹೇಳಿದರು.

ಅವರು ಮಾ.18 ರಂದು ನಡೆದ ಐವರ್ನಾಡು ಗ್ರಾಮದ ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಎಡಮಲೆ , ನಾಲ್ಕುಮನೆ ಆಡಳ್ತೆದಾರರಾದ ಕುಳ್ಳಂಪಾಡಿ ಎಲ್ಯಣ್ಣ ಗೌಡ , ಎಡಮಲೆ ಗುರುಪ್ರಸಾದ್, ಕೀಲಾಡಿ ರಾಮಚಂದ್ರ ಗೌಡ, ಮಿತ್ತಮೂಲೆ ದಾಮೋದರ ಗೌಡ ಉಪಸ್ಥಿತರಿದ್ದರು.ಎಲ್ಯಣ್ಣ ಗೌಡವ ಕುಳ್ಳಂಪಾಡಿ ಸ್ವಾಗತಿಸಿ, ಸತೀಶ ಎಡಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ದೈವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿ ಗ್ರಾಮದ ಎಲ್ಲಾ ಜನರ ಸಹಕಾರ ಕೋರಿ ವಂದಿಸಿದರು.

ಈ ಸಂದರ್ಭದಲ್ಲಿ ಆಡಳ್ತೆದಾರರಾದ ಆರಿಕಲ್ಲು ಗಿರಿಧರ ಗೌಡ, ಬಿರ್ಮುಕಜೆ ಗಂಗಾಧರ ಗೌಡ,ಕುಳ್ಳಂಪಾಡಿ ನೀಲಪ್ಪ ಗೌಡ, ಮಿತ್ತಮೂಲೆ ಮೋನಪ್ಪ ಗೌಡ, ಕತ್ಲಡ್ಕ ಜಯರಾಮ ಗೌಡ, ಸಾರಕರೆ ರುಕ್ಮಯ್ಯ ಪೂಜಾರಿ, ಶಾಂತಿಮೂಲೆ ಪುರಂದರ ನಾಯ್ಕ ಹಾಗೂ ಊರ ,ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಮೊದಲು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ವಾಷ್ಟರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಇವರಿಂದ ಭಕ್ತಿ ಸಂಗೀತ ರಸಮಂಜರಿ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಇವರ ಸಂಯೋಜಕತ್ವದಲ್ಲಿ ನಡೆಯಿತು.ನೇಮೋತ್ಸವವು ಮಾ.18 ರಂದು ಪ್ರಾರಂಭಗೊಂಡಿದ್ದು ಮಾ.19 ರವರೆಗೆ ನಡೆಯಲಿದೆ.ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು.ಮಾ.18 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಸ್ಥಳ ಶುದ್ಧಿ, ಆಯುಧ ಶುದ್ಧಿ, ತಂಬಿಲ ಸೇವೆ ನಡೆಯಿತು.ಸಂಜೆ ಗಂಟೆ 7.00 ಕ್ಕೆ ನೂಜಾಲು ಮಾಳ್ಯದಿಂದ ಭಂಡಾರ ತರಲಾಯಿತು.ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಿತು.

ಮಾ.19 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಮೆಗ್ಯ ನೇಮ ನಡಾವಳಿ ಪ್ರಾರಂಭವಾಗಿ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ ನಡೆಯುತ್ತಿದೆ. ಗಂಟೆ 11.30 ಕ್ಕೆ ನಾಯರ್ ದೈವದ ನೇಮ ನಡೆಯಲಿದೆ.ಮಧ್ಯಾಹ್ನ ಗಂಟೆ 12.30 ಕ್ಕೆ ಪುರುಷ ದೈವದ ಮತ್ತು ಉಪದೈವಗಳ ಕೋಲ ನಡೆಯಲಿದೆ.ಗಂಟೆ 1.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಗಂಟೆ 5.00 ಕ್ಕೆ ದೈವದ ಭಂಡಾರವನ್ನು ನೂಜಾಲು ಮಾಳ್ಯಕ್ಕೆ ಸಾಗಿಸುವುದು.