ಸುಳ್ಯದಲ್ಲಿ ಸೆವೆನ್ತ್ ಹೆವೆನ್ ಕೇಕ್ ಮಳಿಗೆ ಶುಭಾರಂಭ, ಏಳು ನಿಮಿಷದಲ್ಲಿ ಕೇಕ್ ರೆಡಿಯಾಗಿ ಸಿಗುತ್ತದೆ: ರಂಜಿತ್ ಶೆಟ್ಟಿ

0

ಸುಳ್ಯ ಬಸ್ ನಿಲ್ದಾಣ ಬಳಿ ಸುಳ್ಯ ಸಿಟಿ ಸೆಂಟರ್ ನಲ್ಲಿ ಸೆವೆನ್ತ್ ಹೆವೆನ್ ಕೇಕ್ ಮಳಿಗೆ ಶುಭಾರಂಭ ಗೊಂಡಿತು.ಇದರ ಉದ್ಘಾಟನೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಹರಿಕೃಷ್ಣ ಭಟ್,ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮಗುರುಗಳಾದ ರೆ.ಪಾ.ವಿಕ್ಟರ್ ಡಿಸೋಜ, ಮೇನಾಲ ಬಿಲಾಲ್ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಅಶ್ರಫ್ ಜೌಹರಿ ನೆರವೇರಿಸಿದರು.

ಸುಳ್ಯ ಯವ ಉದ್ಯಮಿ ಗುರುದತ್ತ್ ನಾಯಕ್,ಹಿರಿಯರಾದ ಸಂಜೀವ ಶೆಟ್ಟಿ, ಶ್ರೀಮತಿ ರೇವತಿ ಶೆಟ್ಟಿ,ಮುಸ್ತಫಾ ಮೇನಾಲ ಸುರೇಶ್ ಮೂಡಬಿದ್ರೆ,ಅಶ್ವತ್ ಪಣಪಿಲ,ಅರವಿಂದ್ ಸುಳ್ಯ, ಮಹೇಶ್ ಇನ್ಲ್ಯಾಂಡ್ ಬಿಲ್ಡರ್, ನಿತ್ಯಾನಂದ, ಹಿಂದುಸ್ತಾನ್ ಬಿಲ್ಡರ್ ಇಬ್ರಾಹಿಂ, ಇಬ್ರಾಹಿಂ ಶಿಲ್ಪ, ವಿಜಯಕುಮಾರ್ ಮಯೂರಿ,ಮನ್ಸೂರ್ ಮೆಟ್ರೋ, ಮೊದಲಾದವರು ಉಪಸ್ಥಿತರಿದ್ದರು.ನಾರಾಯಣ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮಳಿಗೆಯ ಪಾಲುದಾರ ರಂಜಿತ್ ಮಾತನಾಡಿ ನಮ್ಮ ‌ಮಳಿಗೆ ರಾಜ್ಯದ ವಿವಿಧ ಕಡೆಗಳಲ್ಲಿ ಉದ್ಯಮವನ್ನು ಆರಂಭಿಸಿ ಗ್ರಾಹಕರಿಗೆ ತೃಪ್ತಿದಾಯಕ ಸೇವೆಯೊಂದಿಗೆ ಜನರ ವಿಶ್ವಾಸವನ್ನು ಗೆದ್ದಿದೇವೆ ಅದೇ ರೀತಿ ಸುಳ್ಯ ಉತ್ತಮ ಸೇವೆಯನ್ನು ನೀಡಲು ಬಂದಿದ್ದೇವೆ ಸುಳ್ಯ ಜನರ ಸಹಕಾರ ಅತ್ಯಗತ್ಯ. ಮಳಿಗೆಯಲ್ಲಿ ಕೇಕ್, ಡೆಸರ್ಟ್ಸ್,ಮಗ್ಗ್ ಕೇಕ್ ಗಳು ದೊರೆಯುತ್ತದೆ.ಕೇವಲ ಏಳು ನಿಮಿಷದಲ್ಲಿ ನಿಮಗೆ ಬೇಕಾಗುವ ಪ್ಲೇವರ್ ಕೇಕ್ ಗಳನ್ನು ತಯಾರಿಸಿ ಕೊಡಲಾಗುವುದು ಎಂದರು.ಉದ್ಘಾಟನ ಸಮಾರಂಭದ ಪ್ರಯುಕ್ತ ಮೂರು ದಿನ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.ಪಾಲುದಾರರಾದ ರಂಜಿತ್, ಶುಭಾಶ್ ಮತ್ತು ಶ್ರೀಕಾಂತ್ ಸರ್ವರನ್ನೂ ಸ್ವಾಗತಿಸಿ ಬರಮಾಡಿಕೊಂಡರು.