ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗೌರವ ಸಲಹೆಗಾರರ ಪದಾಧಿಕಾರಿಗಳ ಸಭೆ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಸುಳ್ಯ ಪರಿವಾರಕಾನ ಗ್ರಾಂಡ್ ಪರಿವಾರ್ ಸಭಾಂಗಣದಲ್ಲಿ ಮಾರ್ಚ್ 18 ರಂದು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪದಾಧಿಕಾರಿಗಳ,ಗೌರವ ಸಲಹೆಗಾರರ ಸಭೆ ನಡೆಯಿತು.

ಸಭೆಯಲ್ಲಿ ಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿ ಗಾಗಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು,ನಾಯಕರು, ಕಾರ್ಯಕರ್ತರುಗಳು ತೊಡಗಿಸಿಕ್ಕೊಳ್ಳ ಬೇಕಾದ ತಯಾರಿಗಳ ಕುರಿತು ಚರ್ಚೆಗಳು ನಡೆಯಿತು.ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ಮುಖಂಡರುಗಳು ಮಾತನಾಡಿ ತಮ್ಮ ತಮ್ಮ ಅಭಿಪ್ರಾಯಯಗಳನ್ನು ವ್ಯಕ್ತ ಪಡಿಸಿ ಪಕ್ಷದ ಸುಳ್ಯದ ನಾಯಕರುಗಳು ಕಾರ್ಯಕರ್ತರೊಂದಿಗೆ ಸೇರಿಕ್ಕೊಂಡು ಸಮಾನವಾಗಿ ಚುನಾವಣೆ ಪ್ರಚಾರ ಮತ್ತು ಕೆಲಸ ಕಾರ್ಯದಲ್ಲಿ ತೊಡಗಿಸಿಕ್ಕೊಂಳ್ಳ ಬೇಕು ,ಕಾರ್ಯಕ ರ್ತರ ಸಮಸ್ಯೆಗಳಿಗೆ ಸ್ಪಂಧಿಸಬೇಕು,ಅದೇ ರೀತಿ ಪಕ್ಷದ ಬಹುಸಂಖ್ಯಾಂತ ಮುಖಂಡರು ಗಳ ಸಹಕಾರಕೂಡ ಇರಬೇಕಾಗಿದೆ ಎಂದು ತಮ್ಮ, ತಮ್ಮ ಅಭಿಪ್ರಾಯಗಳನ್ನು ವ್ಯಕ ಪಡಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖಂಡರುಗಳು ಮಾತನಾಡಿ ಈ ಭಾರಿಯ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರಕ್ಕೆ ಪಕ್ಷ ಯಾವುದೇ ಅಭ್ಯರ್ಥಿಯನ್ನು ನೀಡಿದರು ಅವರ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡೋಣ, ಹಿರಿಯರು ನೀಡುವ ಮಾರ್ಗದರ್ಶನ ಪಡೆದು ನಮ್ಮ ಅಭ್ಯರ್ಥಿಯ ಗೆಲುವುಗಾಗಿ ದುಡಿಯೋಣ ಎಂದು ಸಲಹೆ ಸೂಚನೆಗಳನ್ನು ನೀಡಿದರು.ಈ ಸಂಧರ್ಭದಲ್ಲಿ ಬ್ಲಾಕ್ ಮಟ್ಟದಲ್ಲಿ ಆಯ್ಕೆಗೊಂಡಿರುವ ಪದಾಧಿಕಾರಿಗಳಿಗೆ ಅದೇಶ ಪತ್ರ ವನ್ನು ವಿತರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಇಸ್ಮಾಹಿಲ್ ಪಡಿಪಿನಂಗಡಿ ವಹಿಸಿ ಸಭೆಯನ್ನು ಮುನ್ನಡೆಸಿದರು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ .ಪಿ ಸಿ ಜಯರಾಮ್, ಪ್ರಧಾನ ಕಾರ್ಯಧರ್ಶಿ ಪಿ ಎಸ್ ಗಂಗಾಧರ್, ಕೆ ಪಿ ಸಿ ಸಿ ಸಂ ಯೋಜಕ ಎಚ್ ಎಂ ನಂದಕುಮಾರ್,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಶುಕೂರ್,ಪಕ್ಷದ ಮುಖಂಡರುಗಳಾದ ಡಾ. ರಘು,ಹಾಜಿ ಇಶಾಕ್ ಶಾಹೇಬ್ ಪಾಜಪಳ್ಳ, ಹಾಜಿ ಮುಸ್ತಫಾ ಜನತಾ, ಶಂಸುದ್ದೀನ್ ಎಸ್,ಹಾಜಿ ಪಿ ಎ ಮಹಮ್ಮದ್, ಅಬ್ದುಲ್ ಗಫೂರ್ ಕಲ್ಮಡ್ಕ, ಅಬ್ದುಲ್ ಹಮೀದ್ ಕುತ್ತಮೊಟ್ಟೆ,ಮಹಮ್ಮದ್ ಕುಂಞಿ ಗೂನಡ್ಕ, ಮಜೀದ್ ನಡುವಡ್ಕ,ಶಾಫಿ ಕುತ್ತಮೊಟ್ಟೆ,ಹಾಜಿ ಎಚ್ ಎ ಉಮ್ಮರ್,ಧೀರಾಕ್ರಾಸ್ತ,ಮೊದಲಾದವರು ಉಪಸ್ಥಿತರಿದ್ದರು.ಸಭೆಯಲ್ಲಿ ಹಿರಿಯರಾದ ಬಾಪೂ ಸಾಹೇಬ್ ಅರಂಬೂರು,ನ.ಪಂ ಸದಸ್ಯ ಶರೀಷ್ ಕಂಠಿ,ಗ್ರಾ ಪಂ ಸದಸ್ಯ ಸವಾದ್ ಗೂನಡ್ಕ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಮುಖಂಡರುಗಳು ಭಾಗವಹಿಸಿದ್ದರು.