ಪಂಜದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಸಮಾವೇಶ ” ಮಾತೃ ಸಂಗಮ”

0

ಒಂಭತ್ತು ಮಹಿಳೆಯರಿಗೆ ಸುಷ್ಮಾ ಸ್ವರಾಜ್ ಪ್ರಶಸ್ತಿ ಪ್ರದಾನ

ಮಹಿಳೆಯರ ಸಮರ್ಪಣಾ ಶಕ್ತಿಯಿಂದ ಬಿಜೆಪಿ ಬಲಿಷ್ಠ: ಕೇಂದ್ರ ಸಚಿವ ಶ್ರೀಪಾದ ನಾಯಕ್

ಬಿಜೆಪಿ ಇಂದು ಜಗತ್ತಿನಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಮೂಡಿ ಬಂದಿದ್ದರೆ, ಪಕ್ಷ ಸಂಘಟನೆಗೆ ಮಹಿಳೆಯರ ಸಮರ್ಪಣಾ ಶಕ್ತಿ ಪ್ರಧಾನ ಕಾರಣ ಎಂದು ಕೇಂದ್ರ ಪ್ರವಾಸೋದ್ಯಮ, ಹಡಗು ಮತ್ತು ಜಲ ಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯಕ್ ಹೇಳಿದರು.

ಇಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಮೈದಾನದ ಸುಷ್ಮಾ ಸ್ವರಾಜ್ ವೇದಿಕೆಯಲ್ಲಿ ನಡೆದ ಜಿಲ್ಲಾ ಬಿಜೆಪಿ ಮಹಿಳಾ ಸಮಾವೇಶ ” ಮಾತೃ ಸಂಗಮ ” ದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ದಿಗೆ ವೇಗ ಬಂದಿದೆ. ಇದೇ ವೇಗ ಮುಂದುವರಿಯಲು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮಾತೆಯರು ಶಪಥ ಮಾಡಬೇಕು ಎಂದು ಕೇಂದ್ರ ಸಚಿವರು ಹೇಳಿದರು.

ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ರಾಜ್ಯ ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ, ಆರ್ಥಿಕ ಪ್ರಕೋಷ್ಢದ ರಾಜ್ಯ ಸಂಚಾಲಕ ರವೀಂದ್ರ ಪೈ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಸಂಘಟನಾ ಕಾರ್ಯದರ್ಶಿ ಈಶ್ವರ ಕಟೀಲ್, ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಜಿಲ್ಲಾ ಮಹಿಳಾ ಮೋರ್ಚಾದ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಪೂಜಾ ಪೈ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಗಳ, ಸುಳ್ಯ ಮಂಡಲ ಪ್ರಭಾರಿ ಕುಶಾಲಪ್ಪ ಗೌಡ ಪೂವಾಜೆ, ಜಿಲ್ಲಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಶ್ರೀಮತಿ ಜಯಂತಿ ನಾಯಕ್, ಶ್ರೀಮತಿ ಆಶಾ ತಿಮ್ಮಪ್ಪ, ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಶ್ರೀಮತಿ ಸುಲೋಚನಾ ಭಟ್, ಭಾಗೀರಥಿ ಮುರುಳ್ಯ , ಸೇವಂತಿ, ತ್ರಿವೇಣಿ, ವಿವಿಧ ಮಂಡಲಗಳ ಮಹಿಳಾ ಮೋರ್ಚಾ ಅಧ್ಯಕ್ಷರುಗಳಾದ ಶುಭದಾ ರೈ, ಶರಾವತಿ, ಯಶಸ್ವಿನಿ ಭಟ್, ಭಾಗೀರಥಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಪೂರ್ಣಿಮಾ ರಾವ್, ಕುಶಲ ವಿಶು ಕುಮಾರ್, ಶಶಿಕಲಾ ಶೆಟ್ಟಿ, ವಿಜಯ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಗಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀಮತಿ ಸೇವಂತಿ, ಶ್ರೀಮತಿ ಗುಣವತಿ ಕೊಲ್ಲಂತಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗೀತಾ ಶೇಖರ್, ಶ್ರೀಮತಿ ತೇಜಸ್ವಿನಿ ಸಹಕರಿಸಿದರು.

ಸುಷ್ಮಾ ಸ್ವರಾಜ್ ಪ್ರಶಸ್ತಿ ಪ್ರದಾನ

  • ಪಕ್ಷ ಸಂಘಟನೆಯಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು‌ ಸುಷ್ಮಾ ಸ್ವರಾಜ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
  • ಬೆಳ್ತಂಗಡಿಯ ಪುಷ್ಪಾ ಶೆಟ್ಟಿ, ಮೂಡುಬಿದಿರೆಯ ಶಕುಂತಲಾ ಭಟ್ ಹಳೆಯಂಗಡಿ, ಮಂಗಳೂರು ಉತ್ತರದ ರಜನಿ ದುಗ್ಗಣ್ಣ, ಮಂಗಳೂರು ದಕ್ಷಿಣದ ವತ್ಸಲಾ ಕಾಮತ್, ಮಂಗಳೂರಿನ ರಾಜೀವಿ ಶೆಟ್ಟಿ, ಬಂಟ್ವಾಳದ ಸುಮತಿ ‌ಸಜೀಪಮುನ್ನೂರು, ಪುತ್ತೂರು ನಗರದ ಪ್ರೇಮಲತಾ ರಾವ್, ಪುತ್ತೂರು
    ಗ್ರಾಮಾಂತರದ ಶ್ಯಾಮಲಾ ಶೆಣೈ, ಸುಳ್ಯದ ಸುವರ್ಣಿನಿ ಎನ್ ಎಸ್ ಸನ್ಮಾನಕ್ಕೆ ಭಾಜನರಾದರು.