ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ದಶ ಸಂಭ್ರಮ

0

ಹೊನಲು ಬೆಳಕಿನ ಪುರುಷರ ಮ್ಯಾಟ್‌ ಕಬಡ್ಡಿ ಪಂದ್ಯಾಟ- ಸಾಧಕರಿಗೆ ಜನನಿಶ್ರೀ ಪುರಸ್ಕಾರ

ಜನಮನಸೂರೆಗೊಂಡ ಅದ್ದೂರಿಸಂಗೀತ ರಸಮಂಜರಿ- ನೃತ್ಯ ಪ್ರದರ್ಶನ

ಆಲೆಟ್ಟಿ ಗ್ರಾಮದ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ 10 ನೇ ವರ್ಷದ ದಶ ಸಂಭ್ರಮ ಕಾರ್ಯಕ್ರಮವು ನಾರ್ಕೋಡು ಸ.ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಮಾ.18 ರಂದು ಅದ್ದೂರಿಯಾಗಿ ಜರುಗಿತು. ದಶಮಾನೋತ್ಸವದ ಪ್ರಯುಕ್ತ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ (ಗುಂಡ್ಯ ಟ್ರೋಫಿ 2023 )ಇದರ ಉದ್ಘಾಟನಾ ಸಮಾರಂಭವು ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಮುಖ್ಯ ಅಭ್ಯಾಗತರಾಗಿ ಉದ್ಯಮಿ ಗಣೇಶ್ ಶೆಟ್ಟಿ ಮಂಗಳೂರು,ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಸುಳ್ಯ ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಆಲೆಟ್ಟಿ ಪಂ.ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪ್ರಗತಿಪರ ಕೃಷಿಕರು ಉದ್ಯಮಿ ಅಶೋಕ ಪ್ರಭು ಸುಳ್ಯ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,ಆಲೆಟ್ಟಿ ಪಂ. ಸದಸ್ಯ ಚಂದ್ರಕಾಂತ ನಾರ್ಕೋಡು, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಗಣೇಶ್ ಇಂಡಸ್ಟ್ರೀಸ್ ಮಾಲಕ
ಜಗದೀಶ್ ಸರಳಿಕುಂಜ,ನ್ಯಾಯವಾದಿ ಸತೀಶ್ ಕುಂಭಕ್ಕೋಡು, ನಿವೃತ್ತ ಸೈನಿಕ ಗಂಗಾಧರ ಕಲ್ಲೆಂಬಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮದ ವಿವಿಧ ಕ್ಷೇತ್ರದ ಸಾಧಕರಿಗೆ ಜನನಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಾರ್ಮಿಕ ಕ್ಷೇತ್ರದಲ್ಲಿ ಕೃಷ್ಣ ಕಾಮತ್ ಅರಂಬೂರು, ರಾಮಚಂದ್ರ ಆಲೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಜಗದೀಶ್ ಸರಳಿಕುಂಜ, ದೈವರಾಧನೆ ರಾಮ ಮಣಿಯಾಣಿ ಆಲೆಟ್ಟಿ, ದೈವ ನರ್ತಕ ಸೇವೆ ಬಾಬು ಅಜಿಲ ಅರಂಬೂರು, ಮಾಧ್ಯಮ ವಿಭಾಗದಲ್ಲಿ ಜೆ.ಕೆ.ರೈ ನಾರ್ಕೋಡು, ಕೃಷಿ ಕ್ಷೇತ್ರದಲ್ಲಿ ಲಕ್ಷ್ಮಣ ಗೌಡ ಪರಿವಾರ, ಕಲಾ ಕ್ಷೇತ್ರದಲ್ಲಿ (ಸಂಗೀತ) ಶಿವಪ್ರಸಾದ್ ಆಲೆಟ್ಟಿ, ರಾಜಕೀಯ ಕ್ಷೇತ್ರದಲ್ಲಿ ಎನ್.ಎ.ರಾಮಚಂದ್ರ, ‌ಜಯಪ್ರಕಾಶ್ ಕುಂಚಡ್ಕ, ಸಾಮಾಜಿಕ ಕ್ಷೇತ್ರ ಪುರುಷೋತ್ತಮ ‌ಕೋಲ್ಚಾರು, ದೇಶ ಸೇವೆ ಗಂಗಾಧರ ಕಲ್ಲೆಂಬಿ, ಶಿಕ್ಷಣ ಕ್ಷೇತ್ರ ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಯಕ್ಷಗಾನ (ಭಾಗವತ) ಪ್ರವೀಣ್ ಆಲೆಟ್ಟಿ, ‌ಕ್ರೀಡಾ ಕ್ಷೇತ್ರದಲ್ಲಿ ಕು.ಅನುಷಾ ಬಿ ರವರನ್ನು ಒಡಿಯೂರು ಸ್ವಾಮೀಜಿಯವರು ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಲೀಗ್ ಮಾದರಿಯ ಪಂದ್ಯಾಟದಲ್ಲಿ ಸುಳ್ಯ ಮತ್ತು ಕಡಬ ವಿಧಾನಸಭಾ ಕ್ಷೇತ್ರದ ಕಬಡ್ಡಿ ಆಟಗಾರರು ಭಾಗವಹಿಸಿದರು.


ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ, 13000/- ಮತ್ತು ಗುಂಡ್ಯ ಟ್ರೋಫಿ, ದ್ವಿತೀಯ ರೂ, 8000/- ಮತ್ತು ಗುಂಡ್ಯ ಟ್ರೋಫಿ, ತೃತೀಯ ರೂ, 4000/- ಮತ್ತು ಗುಂಡ್ಯ ಟ್ರೋಫಿ, ಚತುರ್ಥ ರೂ, 4000/- ಮತ್ತು ಗುಂಡ್ಯ ಟ್ರೋಫಿ ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ಟ್ರೋಫಿ ನೀಡಲಾಯಿತು. ಪಂದ್ಯಾಟದ ಪ್ರಯುಕ್ತ ಸಂಜೆ ಸಪ್ತಸ್ವರ ಮ್ಯೂಸಿಕಲ್ಸ್ ರವರಿಂದ ಅದ್ದೂರಿ ಸಂಗೀತ ರಸಸಂಜೆ ಹಾಗೂ ತರುಣ್ ಡ್ಯಾನ್ಸ್ ಯುನಿಟ್ ರವರ ನೃತ್ಯ ಪ್ರದರ್ಶನವಾಯಿತು.


ಕಬಡ್ಡಿ ಪಂದ್ಯಾಟದ ಪ್ರಥಮ- ಬಹುಮಾನ ಪಂಜ ಪಂಚಶ್ರೀ, ದ್ವಿತೀಯ- ಪೆರಾಜೆ, ತೃತೀಯ- ಸದಾಶಿವ ನಾಗಪಟ್ಟಣ, ಚತುರ್ಥ- ಸನ್ ರೈಸರ್ಸ್ ಕೋಲ್ಚಾರು ಪಡೆದು ಕೊಂಡಿತು.
ಬೆಳಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಮುಖ್ಯ ಅತಿಥಿಗಳಾದ ರತ್ನಾಕರ ಗೌಡ ಕುಡೆಕಲ್ಲು, ಉದ್ಯಮಿ ದಾಮೋದರ ಪರಮಂಡಲ,ನಿರೂಪಕ ವಿ.ಜೆ.ವಿಖ್ಯಾತ್ ಬಾರ್ಪಣೆ ಯವರು ಬಹುಮಾನ ವಿತರಿಸಿದರು.


ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ , ಕ್ಲಬ್ ಕಾರ್ಯದರ್ಶಿ ಮಹೇಶ್ ಕುತ್ಯಾಳ,ಖಜಾಂಜಿ ರಾಜೇಶ್ ಗುಂಡ್ಯ, ಉಪಾಧ್ಯಕ್ಷ ನಿತಿನ್ ಗುಂಡ್ಯ,
ಗೌರವಾಧ್ಯಕ್ಷರಾದ ಸುನಿಲ್ ಗುಂಡ್ಯ, ಮಾಧವ ನಾಯ್ಕ್ ಎಲಿಕ್ಕಳ, ಅಜಿತ್ ಪಿಂಡಿಮನೆ, ಸಚಿನ್ ಗುಂಡ್ಯ, ಜತೆ ಕಾರ್ಯದರ್ಶಿ ವಿಷ್ಣು ಪ್ರಸಾದ್ ಗುಂಡ್ಯ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕ ರಾಗಿ ಸಹಕರಿಸಿದರು. ರಾತ್ರಿ ಆಗಮಿಸಿದ ಎಲ್ಲಾ ಕ್ರೀಡಾಭಿಮಾನಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಶಾಲಾ ಮೈದಾನವನ್ನು ಆಕರ್ಷಕ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ದಶ ಸಂಭ್ರಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here