ಏ.1 ರಂದು ಭಗವತಿ ದೊಡ್ಡಮುಡಿ

ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಮಾ.10 ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಏ.10ರವರೆಗೆ ನಡೆಯಲಿದೆ. ಈಗಾಗಲೇ ಊರಿನ ಭಕ್ತಾಭಿಮಾನಿಗಳಿಂದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಾಲಯದ ಶ್ರಮದಾನದಲ್ಲಿ ಮಾ.19 ರಂದು ಸ್ವಚ್ಛತಾ ಕಾರ್ಯಕ್ರಮ, ಚಪ್ಪರದ ಕೆಲಸದಲ್ಲಿ ಭಾಗವಹಿಸದ್ದಾರೆ. ದೇವಾಲಯದ ಆವರಣವನ್ನು ಮಾತೆಯರ ಬಹುದೊಡ್ಡ ತಂಡ ಸ್ವಚ್ಛ ಮಾಡುವುದರೊಂದಿಗೆ ಆವರಣವನ್ನು ನೀರು ಹಾಕಿ ಸ್ವಚ್ಛಗೊಳಿಸಿದ್ದಾರೆ. ಪುರುಷರ ತಂಡವು ಅಲ್ಲಲ್ಲಿ ಚಪ್ಪರದ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ದೇವತಕ್ಕರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಊರ ಭಕ್ತಾಭಿಮಾನಿಗಳು ಪಾಲ್ಗೊಂಡರು.

ಮಾ.25ರಂದು ಉಗ್ರಾಣ ತುಂಬಿಸುವುದು, ಮಾ.26 ರಂದು ಕಲಾಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಶ್ರೀ ಉಳ್ಳಾಕುಲು ಮಾಡದ ಅರಮನೆಯಿಂದ ಭಂಡಾರ ತರುವುದು, ಮುಖ್ಯ ತೋರಣ ಏರಿಸುವುದು, ಶಿಸ್ತು ಅಳೆಯುವುದು, ದೇವರ ಭೂತ ಬಲಿ, ನೃತ್ಯ ಬಲಿ, ಕಟ್ಟೆ ಪೂಜೆ, ಮಾ.27 ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ತುಳು ಕೋಲದ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ , ತುಳು ಕೋಲ ತಿರುವಪ್ಪಗಳು, ಮಾ.28ರಂದು ಬೇಟೆ ಕರಿಮಗನ್ ಈಶ್ವರನ್ ದೈವ, ಮಾ.29 ರಂದು ಪಳ್ಳಿಯಾರ ಬಾಗಿಲು ತೆರೆಯುವುದು, ಮತ್ತಿತರ ದೈವಗಳು ನಡೆಯುವುದು, ಮಾ.30 ರಂದು ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತಿತರ ದೈವಗಳು ನಡೆಯಲಿದೆ.

ಮಾ.31 ರಂದು ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಭಗವತಿ ದೇವಿ ಸಮಾರಾಧನೆ, ತುಳು ಕೋಲಗಳು, ವಿಷ್ಣುಮೂರ್ತಿ, ರಕ್ತೇಶ್ವರಿ, ಪೊಟ್ಟನ್ ದೈವ ತೊಡಂಙಲು ಮತ್ತು ಇನ್ನಿತರ ದೈವಗಳು ನಡೆಯಲಿದೆ. ಏ.೦೧ ರಂದು ವಿಷ್ಣುಮೂರ್ತಿ, ಬೇಟೆ ಕರಿಮಗನ್ ಈಶ್ವರನ್ ದೈವ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 4 ಕ್ಕೆ ಭಗವತಿ ದೊಡ್ಡಮುಡಿ, ಪಯ್ಯೋಳಿ ನಡೆಯಲಿದೆ. ಏ02 ರಂದು ವಾಲಸಿರಿ, ಏ,03 ರಂದು ಮಹಾಪೂಜೆ, ಸಮಾರಾಧನೆ, ದೇವಳದಿಂದ ಉಳ್ಳಾಕುಲು ಭಂಡಾರ ಹೊರಟು ಮಂಟಪದಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ಮಾಡದಲ್ಲಿ ನೇಮ ಮತ್ತು ಇನ್ನಿತರ ನೇಮ ನಡೆಯಲಿದೆ.


ಏ.04 ರಂದು ಕಲ್ಕುಡ, ಪಾಷಾಣಮೂರ್ತಿ, ಕೊರಗ ತನಿಯ ದೈವಗಳ ಕೋಲ, ಏ.05ರಂದು ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು, ಏ.06 ರಂದು ಶ್ರೀ ಕರಿಭೂತ ಕೋಮಾಳಿ ಮಾಮೂಲು ದೈವಗಳ ಹರಿಕೆ ಕೋಲ, ಏ.07 ರಂದು ಗುಳಿಗ ಕೋಲ, ಏ.08ರಂದು ಒತ್ತೆಕೋಲಕ್ಕೆ ಕೂಡುವುದು, ಭಂಡಾರ ತೆಗೆಯುವುದು, ಮೇಲೇರಿ ಕುಳ್ಳಾಟ, ಏ.10 ರಂದು ವಿಷ್ಣುಮೂರ್ತಿ ಒತ್ತೆಕೋಲ, ರುದ್ರಚಾಮುಂಡಿ ಕೋಲ, ಪ್ರಸಾದ ವಿತರಣೆ, ಮಾರಿಕಳ. ಏ.02 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ. ಏ.05ರಂದು ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ, ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಪೆರಾಜೆ ಮತ್ತು ನುರಿತ ಕಲಾವಿದರಿಂದ ಭೀಮಶಂಕರ ಮಹಿಮೆ ಯಕ್ಷಗಾನ ಬಯಲಾಟ. ಏ.09 ರಂದು ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ನಡೆಯಲಿದೆ.