
ನಾರ್ಣಕಜೆಯಲ್ಲಿ ದೈವಗಳ ನೇಮೋತ್ಸವವು ಮಾ. 25 ಮತ್ತು 26 ರಂದು ನಡೆಯಲಿದೆ ಎಂದು ಚೋಮ ನಾರ್ಣಕಜೆ ಮತ್ತು ಶೀನ ನಾರ್ಣಕಜೆ ತಿಳಿಸಿದ್ದಾರೆ.
ಮಾ.25 ರಂದು ಸಂಜೆ 6 ಗಂಟೆಗೆ ಭಂಡಾರ ತೆಗೆದು ರಾತ್ರಿ 9 ಗಂಟೆಗೆ ಗುಳಿಗ ದೈವದ ನೇಮ ನಡೆಯಲಿದೆ. ರಾತ್ರಿ 12 ಗಂಟೆಗೆ ಕಲ್ಕುಡ – ಕಲ್ಲುರ್ಟಿ ದೈವದ ನೇಮ ನಡೆಯಲಿದ್ದು, ರಾತ್ರಿ 3 ಗಂಟೆಗೆ ಪಂಜುರ್ಲಿ ದೈವದ ನೇಮ ನಡೆಯಲಿದೆ.
ಮಾ.26 ರಂದು ಬೆಳಿಗ್ಗೆ 8 ಗಂಟೆಗೆ ಧರ್ಮ ದೈವ ನೇಮ ನಡೆಯಲಿದ್ದು, 11 ಗಂಟೆಗೆ ಕೊರಗಜ್ಜ ದೈವದ ನೇಮ ನಡೆಯಲಿದೆ.