ಕು.ಅನುಜ್ಞ ಜೆ ರೈ ಉನ್ನತ ವ್ಯಾಸಂಗಕ್ಕಾಗಿ ಮಲೇಷಿಯಾಕ್ಕೆ

0

ಬಾಗಲಕೋಟೆ ವಿಶ್ವವಿದ್ಯಾಲಯದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಹಾರ್ಟಿಕಲ್ಚರ್ ವಿದ್ಯಾಭ್ಯಾಸ ಮಾಡುತ್ತಿದ್ದು, ಉನ್ನತ ವ್ಯಾಸಂಗಕ್ಕಾಗಿ ಮಲೇಷಿಯಾಕ್ಕೆ ತೆರಳಲಿದ್ದಾರೆ.

ಇವರು ಬಳ್ಪ ಗ್ರಾಮದ ಕೋಡಿಗದ್ದೆ ಜಯರಾಮ ರೈ ಕೆ ಮತ್ತು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ರತ್ನಾವತಿ ಕೆಯವರ ಪುತ್ರಿ ಮತ್ತು ಹರೀಶ್ ರೈ ಉಬರಡ್ಕರವರ ಸೊಸೆ.

ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹಾಗೂ ಪಿ.ಯು. ಶಿಕ್ಷಣವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.