ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಜಿಲ್ಲಾ ಗವರ್ನರ್ ಭೇಟಿ

0

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ  ಮಾ.18  ರಂದು ಲಯನ್ಸ್ ಜಿಲ್ಲೆ 317 ಆಯ ಜಿಲ್ಲಾ ಗವರ್ನರ್ ಲ|ಪಿ. ಎಂ. ಜೆ. ಎಫ್. ಸಂಜೀತ್ ಶೆಟ್ಟಿ  ಅಧಿಕೃತ ಭೇಟಿ  ಕಾರ್ಯಕ್ರಮ ನಡೆಯಿತು. ಈ  ಸಂದರ್ಭ  ಮಾತನಾಡಿದ ಅವರು  ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸೇವಾ ಕಾರ್ಯದಲ್ಲಿ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಕಳೆದ ಒಂದುವರೆ ವರ್ಷವನ್ನು ಪೂರೈಸಿದ ಈ ಸಂಸ್ಥೆ ಸೇವಾ ವಿಭಾಗದಲ್ಲಿ ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಆಡಳಿತ ವಿಭಾಗದಲ್ಲಿ ಐದನೇ ಸ್ಥಾನವನ್ನು ಹೊಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಟಪ್ರೊಟ ಆರ್. ಶೆಟ್ಟಿಗಾರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ನಿಕಟ ಪೂರ್ವ ಲಯನ್ಸ್ ಜಿಲ್ಲಾ ಗವರ್ನರ್  ವಸಂತಕುಮಾರ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ  ಸಂಧ್ಯಾ ಸಚಿತ್ರ, ವಲಯ ಅಧ್ಯಕ್ಷ ಡಾಟಸಿದ್ದಲಿಂಗ, ಮುಖ್ಯ ವಿಸ್ತರಣಾ ಚೇರ್ಮೆನ್  ಜಯರಾಮ ದೇರ ಪಜ್ಜನ ಮನೆ, ಪ್ರಗತಿ ಸಂಜಿತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ವಿಮಲ ರಂಗಯ್ಯ ಕೊಡ ಮಾಡಿದ ಧ್ವನಿವರ್ಧಕವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿಗೆ, ಸತೀಶ ಕೂಜುಗೋಡು ಕೊಡ ಮಾಡಿದ ಊಟದ ತಟ್ಟೆ ಸ್ಟಾಂಡ್ ಅನ್ನು ಕೊಡಲಾಯಿತು.

ದಿನೇಶ್ ಮೊಗ್ರ, ಸ್ವಾತಿ ಮೊಗ್ರ, ವಿಮಲಾ ರಂಗಯ್ಯ, ದೀಪಕ್. ಎಚ್. ಬಿ ಹಾಗೂ ಬಿಪಿನ್ ಜಾಕೆ ರವರು ಸುಬ್ರಹ್ಮಣ್ಯದ ಯುವ ತೇಜಸ್ ಸಂಸ್ಥೆಗೆ ಆಂಬುಲೆನ್ಸ್ ನಿರ್ವಹಣಾ ವೆಚ್ಚವನ್ನು ಕೊಡುಗೆಯಾಗಿ ನೀಡಿದರು. ಗುರುಪ್ರಸಾದ್ ದಂಪತಿಗಳು ದೇವರಗದ್ದೆ ಅಂಗನವಾಡಿಗೆ ಆಟದ ಸಾಮಾನುಗಳನ್ನು ಇಡಲು ಕಪಾಟಿನ ವ್ಯವಸ್ಥೆಗಾಗಿ ವಿತರಿಸಿದರು, ಹಾಗೂ ಮಿಕ್ಸಿ ಯನ್ನು ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಯುವ ಬರಹಗಾರ, ವಿಕಲಚೇತನ ಉಲ್ಲಾಸ್ ಕಜ್ಜೋಡಿ ಯವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯಪಾಲರು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ. ಕೆ.


ಆರ್. ಶೆಟ್ಟಿಗಾರ್, ಕಾರ್ಯದರ್ಶಿ ಸತೀಶ ಕೂಜುಗೋಡು, ಹಾಗೂ ಕೋಶಾಧಿಕಾರಿ ರಾಮಚಂದ್ರ ಪಳಂಗಾಯ ಅವರುಗಳಿಗೆ PMJF ಪಿನ್ನುಗಳನ್ನು ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ವಿಮಲಾ ರಂಗಯ್ಯ ನಿರೂಪಿಸಿದರು. ಪ್ರೊ. ಕೆ. ಆರ್. ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ ಕೂಜುಗೋಡು ವರದಿ ವಾಚಿಸಿದರು. ಕೋಶಾಧಿಕಾರಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here