300 ಕೋಟಿಯ ಕಾಮಗಾರಿ ಶಿಲಾನ್ಯಾಸ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ನ 300 ಕೋಟಿಯ ಕಾಮಾಗಾರಿಗೆ ಶಿಲಾನ್ಯಾಸ ಮಾ.24 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ನಡೆಯಲಿದೆ ಎಂದು ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.
300 ಕೋಟಿಯ ಮಾಸ್ಟರ್ ಪ್ಲಾನ್ ಸಮಿತಿ ಕಾಮಗಾರಿಯಲ್ಲಿ
ರಥಬೀದಿ, ಆಶ್ಲೇಷ ಮಂಟಪ, ಅನ್ನಛತ್ರ, ಕುಮಾರಧಾರ ಸ್ನಾನ ಘಟ್ಟ, ಕಮರ್ಶಿಯಲ್ ಕಾಂಪ್ಲೆಕ್ಸ್ ಮತ್ತಿತರ ಕೆಲಸಗಳು ನಡೆಯಲಿವೆ. ರಥಬೀದಿ ಮುಂಭಾಗ ಶಿಲಾಮಯ ರಾಜ ಗೋಪುರ ಇರಲಿದ್ದು ಹೊರಗಿನಿಂದ ವಿಜಯನಗರ ಶೈಲಿಯ ರಾಜಬೀದಿ ಕಾಣಿಸಲಿದ್ದು, ಒಳಾಂಗಣದಲ್ಲಿ ಮೈಸೂರು ರಾಜ ಪರಂಪರೆಯ ಕುಸುರಿ ಕೆತ್ತನೆ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯ ಮರದ ಮಾಡು ಇರಲಿದೆ ಎಂದು ತಿಳಿದು ಬಂದಿದೆ.