ಒಂದು ವರ್ಷದಿಂದ ಮನೆ ಮಂದಿಯ ಆಸ್ಪತ್ರೆ ವಾಸ

0

ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಯ ಆರೋಗ್ಯ ವಿಚಾರಿಸಿದ ಅಂಗಾರ

ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಗೆ ಆಗಮಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ರವಿ ಕುಲಾಲ್ ಸಹಿತ ಹಲವು ರೋಗಿಗಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದರು.

ಜಯನಗರ ನಿವಾಸಿ ರವಿ ಕುಲಾಲ್ ಅವರು ಒಂದು ವರ್ಷದ ಹಿಂದೆ ಕೆಲಸ ಮಾಡುವಾಗ ಬಿದ್ದು ಬೆನ್ನು ಮೂಳೆಗೆ ಗಂಭೀರ ಏಟಾಗಿ ಮಲಗಿದ ಸ್ಥಿತಿಯಲ್ಲೇ ಆಸ್ಪತ್ರೆಯಲ್ಲಿದ್ದು, ಅವರ ಪತ್ನಿ, ಮಕ್ಕಳೂ ಕೂಡಾ ಆಸ್ಪತ್ರೆಯಲ್ಲೇ ಇರುವಂತ ಪರಿಸ್ಥಿತಿ ಉಂಟಾಗಿತ್ತು. ಸುದ್ದಿ ಚಾನೆಲ್ ಕಳೆದ ವಾರ ಈ ಕುರಿತ ವಿಶೇಷ ವರದಿ ಪ್ರಕಟವಾಗಿತ್ತು.

ಮಾ.19 ರಂದು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಗೆ ಆಗಮಿಸಿದ್ದ ಸಚಿವ ಅಂಗಾರರು ಈ ವೇಳೆ ರವಿ ಕುಲಾಲ್ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಿ, ವೈದ್ಯರ ಬಳಿ ಸಲಹೆ ಪಡೆದು ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇವೆ ಎಂದು ಭರವಸೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರ್, ಆಸ್ಪತ್ರೆ ರಕ್ಷಾ ಸಮಿತಿಯ ಸದಸ್ಯರುಗಳಾದ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸಮಿತಿಯ ಸದಸ್ಯರುಗಳಾದ ಡಾ.ಮನೋಜ್,ಸುಬ್ರಹ್ಮಣ್ಯ ಕೊಡಿಯಾಲಬೈಲು,ಕೇಶವ ಮಾಸ್ಟರ್,ಗಿರೀಶ್ ಕಲ್ಲಗದ್ದೆ, ಸುನಿಲ್ ಕೇರ್ಪಳ, ಸುನಿತಾ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.