ಸಂಪಾಜೆ : ಬಾಲಚಂದ್ರ ಕಳಗಿಯವರ ಸ್ಮರಣಾರ್ಥ ಮುಕ್ತ ಹಗ್ಗಜಗ್ಗಾಟ ಕ್ರೀಡಾಕೂಟ

0

ಕೊಡಗು ಸಂಪಾಜೆ ಗ್ರಾಮದಲ್ಲಿ ನೆಹರು ಯುವ ಕೇಂದ್ರ, ಕೊಡಗು ಜಿಲ್ಲೆ, ಮಡಿಕೇರಿ.(ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ-ಕೊಡಗು
ಪಯಸ್ವಿನಿ ಯುವಕ ಸಂಘ (ರಿ) ಸಂಪಾಜೆ ಕೊಡಗು ವತಿಯಿಂದ ಶ್ರೀ ಬಾಲಚಂದ್ರ ಕಳಗಿ ಸ್ಮರಣಾರ್ಥ ಮುಕ್ತ ಹಗ್ಗಜಗ್ಗಾಟ ಕ್ರೀಡಾಕೂಟ ಹಾಗೂ ಬಾಲಚಂದ್ರ ಕಳಗಿಯವರ ಜೀವನದ ಕುರಿತು ಉದಯೋನ್ಮುಖ ಬರಹಗಾರ ಪ್ರತೀಕ್ ಪರಿವಾರ ರವರು ಬರೆದ ಕಿರುಪುಸ್ತಕ ಬಿಡುಗಡೆ ಮಾ.18 ರಂದು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅನಾವರಣ ಮಾಡಲಾಯಿತು.


ಈ ಶುಭ ಸಮಾರಂಭದಲ್ಲಿ ಶ್ರೀಮತಿ ಧನ್ಯಾ ಸುಂದರ್ ಅವರ ಪ್ರಾರ್ಥನೆಯೊಂದಿಗೆ ಮೊದಲ್ಗೊಂಡು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ತೀರ್ಥ ಪ್ರಸಾದ್ ದುಗ್ಗಳ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷರಾದ ಶ
ವಿಠಲ್ ಕಳಗಿ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸಂಪಾಜೆ ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್ , ಸಾಹಿತಿ ಮತ್ತು ಮಕ್ಕಳ ತಜ್ಞ ಮೇ.ಕುಷ್ವಂತ್ ಕೋಳಿಬೈಲು, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆಯ ಅಧ್ಯಕ್ಷ ಅನಂತ್ ಎನ್ ಸಿ, ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಯಕುಮಾರ್ ಚೆದ್ಕಾರು, ಶ್ರೀಮತಿ ಇಂದಿರಾ ದೇವಿಪ್ರಸಾದ್, ಊರಿನ ಹಿರಿಯರು, ಕುಮಾರ್ ಚೆದ್ಕಾರು, ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ,ರಾಜಾರಾಮ್ ಕಳಗಿ, ಉಪಾಧ್ಯಕ್ಷರು, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ವೆಂಕಪ್ಪ ಮಾಸ್ತರ್ ಕಡಂಬಡ್ಕ, ನಿವೃತ್ತ ಪ್ರಾಧ್ಯಾಪಕರು ಸಂಪಾಜೆ, ಶ್ರೀ ಪ್ರತೀಕ್ ಪರಿವಾರ, ವಿದ್ಯಾರ್ಥಿ ಹಾಗೂ ಹವ್ಯಾಸಿ ಬರಹಗಾರರು, ಹಾಗೂ ಗೌರವ ಉಪಸ್ಥಿತಿಯಲ್ಲಿ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು.


ಈ ಸಮಾರಂಭದಲ್ಲಿ ಜನನಾಯಕ ಬಾಲಚಂದ್ರ ಕಳಗಿಯವರ ಜೀವನದ ಕುರಿತು ಉದಯೋನ್ಮುಖ ಬರಹಗಾರ ಪ್ರತೀಕ್ ಪರಿವಾರ ರವರು ಬರೆದ ಕಿರುಪುಸ್ತಕ ಅನಾವರಣವನ್ನು ಡಾ.ಕುಷ್ವಂತ್ ಕೋಳಿಬೈಲು ಅವರು ಬಿಡುಗಡೆಗೊಳಿಸಿದರು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 22 ವರ್ಷಗಳ ಕಾಲ ನೀರು ನಿರ್ವಾಹಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿರುವ ದೇವಪ್ಪ ಕುಮಾರಮಂಗಿಲ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 15 ವರ್ಷಗಳ ಕಾಲ ಅಪಘಾತ ರಹಿತ ಮೋಟಾರು ವಾಹನ ಚಾಲನೆಗಾಗಿ 2022 ಮೇ ಸಾಲಿನಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಶಿವರಾಮ ಪಾಲೆಪ್ಪಾಡಿ ಸಂಪಾಜೆ ಹಾಗೂ ಮೊದಲ ಪುಸ್ತಕ ಬರೆದಿರುವ ಹಾಗೂ ಗ್ರಾಮದ ಅಭಿವೃದ್ಧಿ ಹರಿಕಾರನ ಕಿರು ಪುಸ್ತಕ ರಚಿಸಿರುವ ಪ್ರತೀಕ್ ಪರಿವಾರ ಇವರೆಲ್ಲರೂ ಸಮಾರಂಭದಲ್ಲಿ ಸೇರಿದ ಗಣ್ಯರಿಂದ ಸನ್ಮಾನಿಸಲ್ಪಟ್ಟರು. ಈ ಕಾರ್ಯಕ್ರಮಕ್ಕೆ ಊರ ಪರವೂರ ಯುವಕ ಸಂಘಗಳ ಪಧಾಧಿಕಾರಿಗಳು, ಸದಸ್ಯರು, ಯುವತಿ ಮಂಡಲದ ಸದಸ್ಯರು, ಗ್ರಾಮದ ಸಂಘ ಸಂಸ್ಥೆಗಳ ಸದಸ್ಯರುಗಳು, ಕ್ರೀಡಾಭಿಮಾನಿಗಳು, ಬಾಲಚಂದ್ರ ಕಳಗಿ ಅಭಿಮಾನಿಗಳು, ಗ್ರಾಮಸ್ಥರು ಭಾಗವಹಿಸಿದ್ದರು, ಕಾರ್ಯಕ್ರಮದುದ್ದಕ್ಕೂ ಛಾಯಾಗ್ರಹಣದ ಉಚಿತ ಸೇವೆಯನ್ನು ಶರತ್ ಕಾಸ್ಪಾಡಿ ಅವರು ನಡೆಸಿಕೊಟ್ಟರು.


ತಿಲಕ್ ರಾಜ್ ಕಳಗಿ ಸ್ವಾಗತಿಸಿ, ಲೋಹಿತ್ ಹೊದ್ದೆಟ್ಟಿ ವಂದಿಸಿ, ಸುಂದರ್ ಸಂಪಾಜೆ ಮತ್ತು ವಿಠಲ ಜೋಡುಪಾಲ ಇವರು ನಿರೂಪಿಸಿದರು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ರಾಜ್ಯಮಟ್ಟದ ಖ್ಯಾತ ವೀಕ್ಷಕ ವಿವರಣೆಗಾರ ಸುರೇಶ್ ಪಡಿಪಂಡ ಮತ್ತು ಪ್ರಕಾಶ್ ಪಾಟಾಳಿ ನೆರವೇರಿಸಿದರು.
ದಿ । ಶ್ರೀ ಬಾಲಚಂದ್ರ ಕಳಗಿಯ ಸ್ಮರಣಾರ್ಥ
ಪುರುಷರ ಹೊನಲು ಬೆಳಕಿನ ಫುಲ್ ಗ್ರಿಷ್ ಮಾದರಿಯ
ಮುಕ್ತ ಹಗ್ಗಜಗ್ಗಾಟ (505+5 ಕೆ.ಜಿ ಜನಮಿತಿ 8) ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ್ವಾಮಿ ಕೊರಗಜ್ಜ ವಿರಾಟ್ ಕೇಸರಿ ಸಂಪಾಜೆ, ದ್ವಿತೀಯ ಸ್ಥಾನವನ್ನು ಯುವ ಸ್ಫೂರ್ತಿ ಬೆಳ್ಳೆ, ತೃತೀಯ ಸ್ಥಾನವನ್ನು ಕುಂಜಾರ್ ಫ್ರೆಂಡ್ಸ್ ಉಜಿರೆ, ಚತುರ್ಥ ಸ್ಥಾನವನ್ನು ಯುವ ಸ್ಫೂರ್ತಿ ಬೆಳ್ಳೆ ಉಡುಪಿ ಪಡೆದುಕೊಂಡಿತು.