ಅಂಗಡಿ ಮಾಲಕರಿಗೆ ದಂಡ-ಎಚ್ಚರಿಕೆ

ಶಾಲಾ ಬಳಿಯ ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡದಂತೆ ನಿಯಮವಿದ್ದರೂ ಕೆಲವು ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡುವ ಮಾಹಿತಿ ಪಡೆದ ಸುಳ್ಯ ಎಸ್.ಐ. ನೇತೃತ್ವದ ಪೋಲೀಸರ ತಂಡ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಘಟನೆ ವರದಿಯಾಗಿದೆ.
ಶಾಲಾ ಕಾಂಪೌಂಡ್ ನಿಂದ 100 ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ಮಾಡಬಾರದೆಂಬ ನಿಯಮವಿದೆ.ಆದರೆ ಸುಳ್ಯದ ಜ್ಯೋತಿ ಸರ್ಕಲ್ ಬಳಿ, ಜಟ್ಟಿಪಳ್ಳ, ಗಾಂಧಿನಗರ ಹೀಗೆ ಕೆಲವು ಶಾಲಾ ಕಾಂಪೌಂಡ್ ನಿಂದ ಬಳಿಯಿರುವ ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿದೆ. ಈ ಮಾಹಿತಿ ಪಡೆದ ಸುಳ್ಯ ಎಸ್.ಐ. ದಿಲೀಪ್ ನೇತೃತ್ವದ ಪೋಲೀಸರ ತಂಡ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿತು.

ಈ ವೇಳೆ ಅಂಗಡಿಗಳಲ್ಲಿ ತಂಬಾಕು ಪತ್ತೆಯಾಗಿದ್ದು ಅದನ್ನು ವಶ ಪಡಿಸಿ ಕೊಂಡ ಪೋಲೀಸರು ಆ ಅಂಗಡಿ ಮಾಲಕರಿಗೆ ದಂಡ ವಿಧಿಸಿದರಲ್ಲದೆ, ಮಾರಾಟ ಮಾಡದಂತೆ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.