ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ 100 ವಸತಿಗೆ ಮಂಜೂರಾತಿ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತ್ ಗೆ ಬಸವ ವಸತಿ ಯೋಜನೆ ಅಡಿ 80 ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆ ಅಡಿ 20 ಹೀಗೆ ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ 100 ಮನೆಗಳನ್ನು ಕಟ್ಟಲು ಮಂಜೂರಾತಿ ನೀಡಲಾಗಿದೆ‌ ಎಂದು ತಿಳಿದು ಬಂದಿದೆ.

ಒಬಿಸಿ, ಮೈನಾರಿಡಿ, ಇತರೇ ವರ್ಗದವರಿಗೆ ಸಿಗುವ ಬಸವ ವಸತಿ ಯೋಜನೆಯಲ್ಲಿ ಆಯ್ಕೆಯಾದವರಿಗೆ ₹120000 ದೊರೆತರೆ, ಎಸ್.ಸಿ ಮತ್ತು ಎಸ್ ಟಿ ಯವರಿಗೆ ದೊರೆಯುವ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಆಯ್ಕೆಯಾದವರಿಗೆ ₹175000 ದೊರೆಯಲಿದೆ.