ಮಾ.‌ 23- 24: ಬಳ್ಪ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ, ಭಕ್ತಾದಿಗಳಿಂದ ಶ್ರಮದಾನ

0


ಬಳ್ಪ ಗ್ರಾಮದ ಗ್ರಾಮದೈವ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ. 23ರಿಂದ ಮಾ. 24ರ ವರೆಗೆ ಜರಗಲಿದ್ದು, ವಿವಿಧ ಸಂಘಟನೆಗಳ ಸದಸ್ಯರಿಂದ, ಭಕ್ತಾದಿಗಳಿಂದ ಶ್ರಮದಾನ ನಡೆಯಿತು.


ಮಾ. 23ರಂದು ಶ್ರೀ ದುರ್ಗಾ ಧನ್ವಂತರಿ ಮಹಾವಿಷ್ಣು ದೇವಸ್ಥಾನ ವಿಷ್ಣುಮಂಗಲದಲ್ಲಿ ಪೂ. 8.30ರಿಂದ ಸತ್ಯನಾರಾಯಣ ಪೂಜೆ, ದೈವಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅ. 3.00 ಗಂಟೆಯಿಂದ ದೈವಗಳಿಗೆ ವಿಶೇಷ ತಂಬಿಲ ನಡೆಯಲಿದೆ. ಸಂಜೆ 6.00 ಗಂಟೆಗೆ ದೈವಗಳ ಭಂಡಾರ ತೆಗೆದು ರಾತ್ರಿ 8.00ರಿಂದ ಶ್ರೀ ಉಳ್ಳಾಕುಲು, ಕುಮಾರ, ಮದಿಮಾಳು ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ವ್ಯಾಘ್ರ ಚಾಮುಂಡಿ, ರುದ್ರಚಾಮುಂಡಿ, ವರ್ಣಾರ ಪಂಜುರ್ಲಿ, ಮಲೆ ಚಾಮುಂಡಿ, ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಲಿದೆ. ಮಾ.24ರಂದು ಬೆಳಿಗ್ಗೆ 6.00ರಿಂದ ಪುರುಷರಾಯ, ಬೇಡವ ದೈವಗಳ ನೇಮೋತ್ಸವ, ಶ್ರೀ ಶೀರಾಡಿ ರಾಜನ್ ದೈವದ ನೇಮೋತ್ಸವ, ಹರಿಕೆ ಕಾಣಿಕೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಾರಿಕಳಕ್ಕೆ ಹೋಗುವುದು ನಡೆಯಲಿದೆ. ಮಾ. 30ರಂದು ದೈವಗಳಿಗೆ ತಂಬಿಲ, ವಾರ್ಷಿಕ ಮಹಾಸಭೆ ಮತ್ತು 2023-24ನೇ ವರ್ಷದ ನೂತನ ಆಡಳಿತ ಮಂಡಳಿ ರಚನೆ ನಡೆಯಲಿದೆ.

LEAVE A REPLY

Please enter your comment!
Please enter your name here