ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ

0

ವರ್ತಕರ ತಂಡ ವಿನ್ನರ್ – ಮೆಸ್ಕಾಂ ರನ್ನರ್

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ 13 ನೇ ವರ್ಷದ ಸುದ್ದಿ ಸೌಹಾರ್ದ ಟ್ರೋಫಿ ಪಂದ್ಯಾಟದಲ್ಲಿ ಸುಳ್ಯದ ವರ್ತಕರ ತಂಡ ಪ್ರಶಸ್ತಿಯನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಮೆಸ್ಕಾಂ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.

ಸೆಮಿಫೈನಲ್ಸ್ ನಲ್ಲಿ ಸರಕಾರಿ ನೌಕರರ ತಂಡವನ್ನು ಪರಾಭವ ಗೊಳಿಸಿಸ ಮೆಸ್ಕಾಂ ತಂಡ ಫೈನಲಿಗೇರಿದರೆ, ವರ್ತಕರ ತಂಡವು ‌ಕೆ.ವಿ.ಜಿ. ಕ್ಯಾಂಪಸ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.

ಬೆಳಗ್ಗಿನಿಂದ ಸಂಜೆಯ ತನಕ ನಡೆದ ಪಂದ್ಯಾಟದಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದವು.