ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಎಸ್.ಎಸ್.ಎಲ್. ಸಿ . ವಿದ್ಯಾರ್ಥಿಗಳ ಬೀಳ್ಕೊಡುಗೆ

0

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯ 2022-23 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಮಾ.20 ರಂದು ಏರ್ಪಡಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನದೀಪ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಭಟ್ ತಳೂರು ವಹಿಸಿದ್ದರು. ಹಾಗೂ ಸಂಚಾಲಕರಾದ ಎ. ವಿ. ತೀರ್ಥರಾಮ, ನಿರ್ದೇಶಕರಾದ ಕೃಷ್ಣಯ್ಯ ಮೂಲೆತೋಟ, ರಾಧಾಕೃಷ್ಣ ಶ್ರೀಕಟೀಲ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ್ ಬಾಳುಗೋಡು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಅಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಹಾಗೂ ಕಿರಿಯ ವಿದ್ಯಾರ್ಥಿಗಳು ಮಾತನಾಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬೀಳ್ಕೊಳ್ಳಲ್ಪಡುವ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ತಮ್ಮ ಹನ್ನೆರಡು ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮಾತನಾಡಿ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ಶಾಲೆಗೆ ಉತ್ತಮ ಪಲಿತಾಂಶ ತಂದು ಕೊಡುವೆವು ಎಂಬ ಭರವಸೆಯನ್ನು ನೀಡಿದರು.

ತಮ್ಮ ಕಲಿಕೆಯ ಸ್ಮರಣಿಕೆಯಾಗಿ ಶಾಲೆಗೆ ಬ್ಯಾಂಡ್ ಸೆಟ್ ನ್ನು ಕೊಡುಗೆಯಾಗಿ ನೀಡಿದರು. ಬೀಳ್ಕೊಳ್ಳಲ್ಪಡುವ ವಿದ್ಯಾರ್ಥಿಗಳಿಗಾಗಿ ಕಿರಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದರು ಹಾಗೂ ಅವರ ಪರವಾಗಿ ಎಲ್ಲರಿಗೂ ಸಿಹಿಯನ್ನು ಹಂಚಿದರು..