ಇಂದು ಧರ್ಮದೈವಗಳ ಪ್ರತಿಷ್ಠೆ – ರಾತ್ರಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ
ಮಾ.24(ನಾಳೆ), ಮಾ.25 : ಶ್ರೀ ದೈವಗಳ ನೇಮೋತ್ಸವ

ಮರ್ಕಂಜದ ಮಿವಾಣಿಗುತ್ತು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಮಿವಾಣಿಗುತ್ತು ತರವಾಡು ಮನೆಯ ಪ್ರವೇಶೋತ್ಸವ ಮತ್ತು ಧರ್ಮದೈವಗಳ ಪ್ರತಿಷ್ಠೆೆ ಶ್ರೀ ಕಟೀಲು ಮೇಳದವರಿಂದ ಸೇವೆಯ ಯಕ್ಷಗಾನ ಬಯಲಾಟ ಮತ್ತು ಧರ್ಮದೈವಗಳ ನೇಮೋತ್ಸವವು ಮಾ.22 ರಿಂದ ಮಾ.25ರವರೆಗೆ ನಡೆಯಲಿದೆ.
ಮಾ.22ರಂದು ಸಂಜೆ 5.30 ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳ ಶುದ್ಧಿ ಸ್ವಸ್ತಿ ಪುಣ್ಯಾಹ, ರಕೋಘ್ನ ಹೋಮ ವಾಸ್ತುಹೋಮ, ವಾಸ್ತುಬಲಿ, ಬಿಂಬಾಧಿವಾಸ, ದಿಕ್ಪಾಲಬಲಿ ರಕ್ಷೆ ನಡೆಯಿತು.
ಮಾ.23ರಂದು (ಇಂದು) ಬೆಳಗ್ಗೆೆ 8.00 ರಿಂದ ಗಣಹೋಮ, ಕಲಶಪೂಜೆ, 10.05ಕ್ಕೆೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆೆ, ಕಲಶಾಭಿಷೇಕ, ತಂಬಿಲ, ಸತ್ಯನಾರಾಯಣ ಪೂಜೆ, ಮುಡಿಪು ಪೂಜೆ ನಡೆಯಲಿದೆ.

ಮಧ್ಯಾಹ್ನ 12.00ಕ್ಕೆೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5.30 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ‘‘ಶ್ರೀ ದೇವಿ ಮಹಾತ್ಮೆೆ’’ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ.

ಮಾ.24ರಂದು ಬೆಳಗ್ಗೆೆ 10.00 ರಿಂದ ಹರಿಸೇವೆ, ಸಂಜೆ 6.00ರಿಂದ ಕುಟುಂಬದ ಧರ್ಮದೈವಗಳ ಭಂಡಾರ ಹಿಡಿದು ನೇಮೋತ್ಸವ, ರಾತ್ರಿ 8.00 ರಿಂದ ಶ್ರೀ ಕಲ್ಲುರ್ಟಿ, ಪಂಜುರ್ಲಿ ದೈವಗಳ ನೇಮ
ರಾತ್ರಿ 11.00 ರಿಂದ ಶ್ರೀ ಕೊರತಿ ದೈವದ ನೇಮ ನಡೆಯಲಿದೆ.
ಮಾ.25ರಂದು ಬೆಳಗ್ಗೆೆ 8.30 ರಿಂದ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮ, ಮಧ್ಯಾಹ್ನ 12.00 ರಿಂದ ಶ್ರೀ ಗುಳಿಗ ದೈವದ ನೇಮ ನಡೆಯಲಿದೆ.