ಅಂಗಾರ ಅಭ್ಯರ್ಥಿತನಕ್ಕೆ ಭುಗಿಲೆದ್ದ ಭಿನ್ನಮತ

0

ಬಿ.ಜೆ.ಪಿ.ಯ ಸ್ವಾಭಿಮಾನಿ ಬಳಗ ಹಾಗೂ ಸಮಾನ ಮನಸ್ಕರ ಗುಪ್ತಸಭೆ

ಹೊಸ ಅಭ್ಯರ್ಥಿ ಹೂಡಲು ಹೈಕಮಾಂಡ್ ಗೆ ಮನವಿ ಮಾಡಲು ನಿರ್ಧಾರ

ಮುಂದಿನ ವಿಧಾನಸಭಾ ಚುನಾವಣೆಗೆ ಸಚಿವ ಅಂಗಾರರನ್ನು ಮತ್ತೆ ಅಭ್ಯರ್ಥಿಯಾಗಿಸಲು ನಿರ್ಧರಿಸಲಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ , ಅಂಗಾರರನ್ನು ಈ ಬಾರಿ ಬದಲಾಯಿಸಬೇಕೆಂದು ಒತ್ತಾಯಿಸುತ್ತಿರುವ ಬಿ.ಜೆ.ಪಿ.ಯೊಳಗಿನ ಗುಂಪು ಗುಪ್ತ ಸಭೆ ನಡೆಸಿರುವುದಾಗಿ ತಿಳಿದುಬಂದಿದೆ.


ನಿನ್ನೆ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಸಭೆ ಸೇರಿದ ಗ್ರಾ.ಪಂ.ಚುನಾವಣೆಯ ವೇಳೆ ಸ್ವಾಭಿಮಾನಿಗಳಾಗಿ ಸ್ಪರ್ಧಿಸಿದ್ದ ಬಿ.ಜೆ.ಪಿ. ಪ್ರಮುಖರು ಹಾಗೂ ಅಭ್ಯರ್ಥಿ ಬದಲಾವಣೆ ವಿಚಾರದಲ್ಲಿ ಸಮಾನ ಮನಸ್ಕತೆ ಹೊಂದಿರುವವರು ಅಂಗಾರರನ್ನು ಮತ್ತೆ ಅಭ್ಯರ್ಥಿಯನ್ನಾಗಿಸದಂತೆ ಪಕ್ಷದ ವರಿಷ್ಟರಿಗೆ ಮನವರಿಕೆ ಮಾಡಲು ನಿರ್ಧರಿಸಿತೆಂದು ತಿಳಿದುಬಂದಿದೆ.
ಸಭೆಯಲ್ಲಿ 19 ಗ್ರಾಮಗಳ 50 ಕ್ಕಿಂತ ಹೆಚ್ಚು ಪ್ರಮುಖರು ಭಾಗವಹಿಸಿದ್ದರೆನ್ನಲಾಗಿದ್ದು, ಅದರಲ್ಲಿ ಕಡಬದ ಕೆಲವರು ಇದ್ದರೆಂದು ಹೇಳಲಾಗಿದೆ.