ವಳಲಂಬೆಯಲ್ಲಿ ನಾಳೆ (ಮಾ.24) ರಂದು 38ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ, ಮಾ.25. ರಾಜ್ಯ ದೈವ ಹಾಗೂ ಪುರುಷ ದೈವದ ನೇಮ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಮಾ.24 ರ ಬೆಳಗ್ಗೆ ಗಣಪತಿ ಹೋಮ, ಬೆಳಿಗ್ಗೆ ಶತ ರುದ್ರಾಭಿಷೇಕ, 38 ನೇ ವರ್ಷದ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಬೆಳಿಗ್ಗೆ ಕಂದ್ರಪ್ಪಾಡಿ ಮತ್ತು ತಳೂರಿನಿಂದ ಪುರುಷದೈವ ಮತ್ತು ರಾಜ್ಯ ದೈವದ ಭಂಡಾರ ಬರಲಿದೆ. ಸಂಜೆ ಭಜನಾ ಕಾರ್ಯಕ್ರಮ, ಹಾಗೂ ರಾತ್ರಿ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ.

ರಾತ್ರಿ ಗಂಟೆ 9-30ರಿಂದ ಯಕ್ಷಗಾನ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಲಿ ಗೋಳಿಗರಡಿ ವತಿಯಿಂದ ಗೋಳಿಗರಡಿ ಕ್ಷೇತ್ರ ಮಹಾತ್ಮೆ ನಡೆಯಲಿದೆ.

ಮಾ. 25 ರಂದು ಪ್ರಾತಃಕಾಲ ರಾಜ್ಯ ದೈವದ ನೇಮ ನಡೆದು ಪುರುಷ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.