ಕಲ್ಮಕಾರಿನಲ್ಲಿ ಮತ್ತೊಂದು ಮತದಾನ ಬಹಿಷ್ಕಾರದ ಬ್ಯಾನರ್

0

ಪದ್ನಡ್ಕ, ಪೆರ್ಮಕಜೆ, ಅಂಜನಕಜೆ ಭಾಗದವರಿಂದ ಹಕ್ಕುಪತ್ರಕ್ಕಾಗಿ ಮತದಾನ ಬಹಿಷ್ಕಾರ

ಕಲ್ಮಕಾರು ಗ್ರಾಮದ ಪದ್ನಡ್ಕ, ಪೆರ್ಮಕಜೆ, ಅಂಜನಕಜೆ ಯ ಭಾಗದ ಜನರು ಹಕ್ಕುಪತ್ರಕ್ಕಾಗಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಲ್ಮಕಾರು ಪೇಟೆಯಲ್ಲಿ ಮಾ.23 ರ ಸಂಜೆ ಬ್ಯಾನರ್ ಅಳವಡಿಸಲಾಗಿದೆ.

ಕಳೆದ 80 ವರ್ಷಗಳಿಂದ ಇಲ್ಲಿ ಮನೆ ಮಾಡಿ ಜೀವನ ಮಾಡುತಿದ್ದರೂ ಹಕ್ಕು ಪತ್ರ ಲಭಿಸಿಲ್ಲ. 107 ಸರ್ವೆ ನಂಬರ್ ನ 50 ಮನೆಯವರು ಮತದಾನ ಬಹಿಷ್ಕರಿಸುವುದಾಗಿ ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ. ಮಾ.22 ರಂದು ಕಲ್ಮಕಾರಿನಲ್ಲಿ ಸೇತುವೆ ಬೇಡಿಕೆ ಮುಂದಿರಿಸಿ ಮತದಾನ ಬಹಿಷ್ಕಾರ ದ ಬ್ಯಾನರ್ ಹಾಕಲಾಗಿತ್ತು.

LEAVE A REPLY

Please enter your comment!
Please enter your name here